ನವೀನ್ ಪಟ್ನಾಯಕ್ 
ದೇಶ

ಮಾಜಿ ಶಾಸಕನಿಂದ ಅತ್ಯಾಚಾರ: ಒಡಿಶಾ ಸಿಎಂ ಮನೆ ಮುಂದೆ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ

ಬಿಜೆಡಿ ಮಾಜಿ ಶಾಸಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರು ಇಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಭುವನೇಶ್ವರ:  ಬಿಜೆಡಿ ಮಾಜಿ ಶಾಸಕರಿಂದ ಅತ್ಯಾಚಾರಕ್ಕೊಳಗಾಗಿದ್ದ  ಮಹಿಳೆಯೊಬ್ಬರು ಇಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
2014 ರಲ್ಲಿ ಬಿಜು ಜನತಾ ದಳ  ಎಂಎಲ್ಎ ಶ್ರೀನಾಥ್ ಸೋರನ್ ಗೆ ತಾನು ಕೆಲಸ ಪಡೆದುಕೊಳ್ಳಲಿಕ್ಕಾಗಿ  1 ಲಕ್ಷ ರೂ. ನೀಡಿದ್ದನೆಂದು ಆರೋಪಿಸಿದ ಮಹಿಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಕ್ಕೆ ಯತ್ನಿಸಿದ್ದಾರೆ. ಆವೇಳೆ  ಭದ್ರತಾ ಸಿಬ್ಬಂದಿಗಳು  ಆಕೆಯನ್ನು ತಡೆದು ದೂರ ಕಳಿಸಿದ್ದಾರೆ.
"ಸೊರೆನ್ ಕೆಲಸವನ್ನು ಕೊಡಿಸುವುದಾಗಿ ಮಹಿಳೆಯಿಂದ ಹಣ ಪಡೆಇದ್ದರು, ಆದರೆ ಆ ವಾಗ್ದಾನವನ್ನು ಅವರು ಪೂರೈಸಿರಲಿಲ್ಲ. ಇದರಿಂದ ಬೇಸತ್ತ ಮಹಿಳೆ ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರ ಆರೋಗ್ಯ ಸ್ಥಿಅವಾಗಿದೆ"ಪೊಲೀಸರು ಹೇಳಿದ್ದಾರೆ.
2014ರಲ್ಲಿ, ಸೊರೆನ್ ಮತ್ತು ಅವರ ಸಹಾಯಕ ಸ್ವರೂಪ್ ದಾಸ್ ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ದಾಖಲಾಗಿತ್ತು.ಸರ್ಕಾರಿ ಕೆಲಸಕ್ಕಾಗಿ ಸೊರೆನ್ ಗೆ 1 ಲಕ್ಷ ರೂಪಾಯಿ ನೀಡಿರುವುದಾಗಿ ಮಹಿಳೆ ಆರೋಪಿಸಿದ ಬಳಿಕ ಈ ಪ್ರಕರಣ ದಾಖಲಾಗಿದೆ. ಸೊರೆನ್ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ, ಹಣವನ್ನು ಹಿಂದಿರುಗಿಸಲು ಆಕೆ ಒತ್ತಾಯಿಸಿದ್ದು ಆ ವೇಳೆ ಹಣ ಹಿಂಪಡೆಯಲು ಆಗಮಿಸುವಂತೆ ಹೇಳಿದ್ದ ಮಾಜಿ ಶಾಸಕ ಸೊರೆನ್ ತನ್ನ ಸಹಾಯಕನ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರೆಂದು ಆಕೆ ದೂರಿನಲ್ಲಿ ಹೇಳೀದ್ದಾರೆ. .

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT