ದೇಶ

ಬಾಲಾಕೋಟ್ ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಮಟಾಶ್: ಅಭಿನಂದನ್ ತಂದೆ ಹೇಳಿದ್ದೇನು?

Vishwanath S
ಚೆನ್ನೈ: ಬಾಲಾಕೋಟ್ ಏರ್‌ಸ್ಟ್ರೈಕ್‌ನಲ್ಲಿ 250 ರಿಂದ 300 ಉಗ್ರರು ಸತ್ತಿರಬಹುದು ಎಂದು ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತಂದೆ ಸಿಂಹಕುಟ್ಟಿ ವರ್ತಮಾನ್ ಅಭಿಪ್ರಾಯಪಟ್ಟಿದ್ದಾರೆ.
ಉಗ್ರರ ಸಾವು ಕುರಿತಂತೆ ಲೆಕ್ಕ ಕೊಡಿ ಎಂದು ವಿಪಕ್ಷಗಳು ಕೇಳುತ್ತಿದ್ದಾವೆ. ಇದರ ಮಧ್ಯೆ ಪಾಕ್ ನ ಎಫ್-16 ಯುದ್ಧ ವಿಮಾನವನ್ನು ಮಿಗ್-21 ವಿಮಾನದ ಮೂಲಕ ಹೊಡೆದುರುಳಿಸಿ ಪರಾಕ್ರಮ ಮೆರೆದಿದ್ದರು. 
ಐಐಟಿ-ಮದ್ರಾಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಹಕುಟ್ಟಿ ವರ್ತಮಾನ್ ಅವರು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆಯ ಏರ್‌ಸ್ಟ್ರೈಕ್‌ ನಡೆಸಿದ್ದು ಇದರಲ್ಲಿ ಗರಿಷ್ಠ ಹಾನಿ ಸಂಭವಿಸಿದೆ ಎಂದು ಹೇಳಿದರು. 
ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಬಾಲಾಕೋಟ್ ನಲ್ಲಿ ಏರ್‌ಸ್ಟ್ರೈಕ್‌ ನಡೆಸಿತ್ತು.
SCROLL FOR NEXT