ದೇಶ

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಯುದ್ಧೋನ್ಮಾದ ಸೃಷ್ಟಿ: ಅಮೆರಿಕ ನಿಯತಕಾಲಿಕೆ ಆಧರಿಸಿ ಪಾಕ್ ಆರೋಪ

Srinivas Rao BV
ಇಸ್ಲಾಮಾಬಾದ್: 2019 ರ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ಬಿಜೆಪಿಯಿಂದ ಯುದ್ಧೋನ್ಮಾದ ಸೃಷ್ಟಿಯಾಗುತ್ತಿದೆ ಎಂದು ಅಮೆರಿಕ ನಿಯತಕಾಲಿಕೆಯ ವರದಿಯನ್ನು ಆಧರಿಸಿ ಪಾಕಿಸ್ತಾನ ಆರೋಪ ಮಾಡಿದೆ. 
ತನ್ನ ಸೇನೆಯ ಎಫ್-16 ಫೈಟರ್ ಜೆಟ್ ನ್ನು ಭಾರತ ಸೇನೆ ಧ್ವಂಸಗೊಳಿಸಿತ್ತು ಎಂಬ ಅಂಶವನ್ನು ನಿರಾಕರಿಸಿರುವ ಪಾಕಿಸ್ತಾನ ತನ್ನ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಅಮೆರಿಕ ನಿಯತಕಾಲಿಕೆಯ ವರದಿಯನ್ನು ಉಲ್ಲೇಖಿಸಿದೆ. 
ಪುಲ್ವಾಮ ದಾಳಿಗೆ ಪ್ರತಿಯಾಗಿ ಪಾಕ್ ಉಗ್ರರ ನೆಲೆಗಳ ಮೇಲೆ ನಡೆದ ವೈಮಾನಿಕ ದಾಳಿಯ ನಂತರ ಭಾರತದ ಗಡಿ ವಾಯುಗಡಿ ದಾಟಿದ್ದ ಎಫ್-16 ಫೈಟರ್ ಜೆಟ್ ಗಳನ್ನು ಹೊಡೆದುರುಳಿಸಿತ್ತು. ಈ ಘಟನೆ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ನಿಯತಕಾಲಿಕೆ ವರದಿ ಪ್ರಕಟಿಸಿದ್ದು, ಅಮೆರಿಕ ನಿರ್ಮಿತ ಯಾವುದೇ ಎಫ್-16 ಫೈಟರ್ ಜೆಟ್ ಗಳು ಪಾಕಿಸ್ತಾನ ಸೇನೆಯಿಂದ ನಾಪತ್ತೆಯಾಗಿಲ್ಲ ಎಂದು ಹೇಳಿತ್ತು. ಪರಿಸ್ಥಿತಿಯ ಬಗ್ಗೆ ಅರಿವಿರುವ ಅಮೆರಿಕದ ಇಬ್ಬರು ಹಿರಿಯ ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ನಿಯತಕಾಲಿಕೆ ವರದಿ ಪ್ರಕಟಿಸಿತ್ತು. 
ಅಮೆರಿಕದ ನಿಯತಕಾಲಿಕೆ ವರದಿಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ಆಡಳಿತಾರೂಢ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಸತ್ಯ ಎಂದಿಗೂ ಗೆಲ್ಲುತ್ತದೆ, ಅದೇ ಅತ್ಯುನ್ನತ ತತ್ವ. ಬಿಜೆಪಿ  ಯುದ್ಧೋನ್ಮಾದ ಸ್ಥಿತಿಯನ್ನು ನಿರ್ಮಿಸುವ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಪಾಕಿಸ್ತಾನದ ಎಫ್-16 ನ್ನು ಹೊಡೆದುರುಳಿಸಿದ್ದೇವೆ ಎಂದು ಬಿಜೆಪಿ ನೇತೃತ್ವದ ಸರ್ಕಾರ ಹೇಳಿತ್ತು. ಆದರೆ ಅಮೆರಿಕ ಸೇನಾ ಅಧಿಕಾರಿಗಳು ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿದ್ದು, ಬಿಜೆಪಿಗೆ ಇದು ತಿರುಗುಬಾಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 
SCROLL FOR NEXT