ದೇಶ

‘ಪಿಎಂ ನರೇಂದ್ರ ಮೋದಿ’ ಚಿತ್ರದ ಮೇಲಿನ ನಿಷೇಧ 'ನಮೋ ಟಿವಿ'ಗೂ ಅನ್ವಯ: ಹಿರಿಯ ಅಧಿಕಾರಿ

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ "ಪಿಎಂ ನರೇಂದ್ರ ಮೋದಿ" ಚಿತ್ರದ ಮೇಲಿನ ನಿಷೇಧ ನಮೋ ಟಿವಿ ಪ್ರಸಾರಕ್ಕೂಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
‘ಪಿಎಂ ನರೇಂದ್ರ ಮೋದಿ’ಚಿತ್ರ ನಿಷೇಧಿಸಿ ಚುನಾವಣಾ ಆಯೋಗ ಹೊರಡಿಸಿರುವ ಆದೇಶದಲ್ಲಿನ ಒಂದು ಪ್ಯಾರಾಗ್ರಾಫ್ ಅನ್ನು ಹಿರಿಯ ಅಧಿಕಾರಿ ಉಲ್ಲೇಖೀಸಿದ್ದು, ಅದರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವಲ್ಲಿ ಯಾವುದೇ ಅಭ್ಯರ್ಥಿಯ ಫೋಟೋ, ಪೋಸ್ಟರ್‌, ಜಾಹೀರಾತುಗಳು, ಆತನ ಚುನಾವಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಲ್ಲಿ ಆ ಪ್ರದೇಶದಲ್ಲಿನ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರದರ್ಶಿಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್‌ ಚಿತ್ರವನ್ನು ಚುನಾವಣೆಯ ಸಂದರ್ಭದಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗಯಷ್ಟೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆದಿರುವ ಚಿತ್ರದ ನಿರ್ಮಾಪಕರು, 'ಮೊದಲ ಹಂತದ ಮತದಾನ ನಡೆಯಲಿರುವ ಏ.11ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಚುನಾವಣಾ ಆಯೋಗ ಅದಕ್ಕೆ ತಡೆ ನೀಡಿದೆ.
SCROLL FOR NEXT