ದೇಶ

ಎಂ ಜೆ ಅಕ್ಬರ್ ಮಾನನಷ್ಟ ಮೊಕದ್ದಮೆ ಕೇಸು; ನಾನು ಮುಗ್ಧೆ ಎಂದು ಕೋರ್ಟ್ ಮುಂದೆ ವಾದಿಸಿದ ಪ್ರಿಯಾ ರಮಣಿ

Sumana Upadhyaya
ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ಮೇಲೆ ದೆಹಲಿ ಕೋರ್ಟ್ ಬುಧವಾರ ಮಾನನಷ್ಟ ಮೊಕದ್ದಮೆ ಕೇಸು ದಾಖಲಿಸಿದೆ.
ಈ ಬಗ್ಗೆ ಇಂದು ದೆಹಲಿ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರ ಮುಂದೆ ವಿಚಾರಣೆಗೆ ಹಾಜರಾದ ಪ್ರಿಯಾ ರಮಣಿ ಅಪರಾಧಿ ಎಂದು ತೀರ್ಪು ನೀಡದೆ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ತಮ್ಮ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ಹಿನ್ನಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 17ರಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂ ಜೆ ಅಕ್ಬರ್ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಖಾಸಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು.
ಪತ್ರಕರ್ತರಾಗಿದ್ದಾಗ ಎಂ ಜೆ ಅಕ್ಬರ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಮಿ ಟೂ ಅಭಿಯಾನದಡಿ ಪ್ರಿಯಾ ರಮಣಿ ಕಳೆದ ವರ್ಷ ಆರೋಪಿಸಿದ ನಂತರ ಅದು ತೀವ್ರ ಸುದ್ದಿಯಾಗಿತ್ತು. ಅದನ್ನು ಅಕ್ಬರ್ ನಿರಾಕರಿಸಿದರಾದರೂ ಸಚಿವ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
SCROLL FOR NEXT