ನವದೆಹಲಿ: ಎಲ್ಲಾ ರಾಜಕೀಯ ಪಕ್ಷಗಳೂ ಮುಚ್ಚಿದ ಲಕೋಟೆಯಲ್ಲಿ ದಾನಿಗಳ ಗುರುತಿನ ವಿವರ ಹಾಗೂ ಚುನಾವಣಾ ಬಾಡ್ ಗಳ ರಸೀದಿಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಶುಕ್ರವಾರ ಸುಪ್ರೀಂ ಕೋರ್ಟ್ಆದೇಶ ನೀಡಿದೆ.
ತನ್ನ ಮಧ್ಯಂತರ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ಮೇ 30ಕ್ಕೆ ಮುನ್ನ ಚುನಾವಣಾ ಆಯೊಗಕ್ಕೆ ದಾನಿಗಳ ಮೊತ್ತದ ವಿವರ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಲು ಎಲ್ಲಾ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದೆ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಒಳಗೊಂಡ ನ್ಯಾಯಪೀಠವು ಈ ಆದೇಶವನ್ನು ನೀಡಿದೆ.
ಚುನಾವಣಾ ಬಾಂಡ್ ಗಳ ಸಿಂಧುತ್ವವನ್ನು ಪ್ರಶ್ನ್ಸಿಇ ಎನ್ಜಿಒ ಒಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಆದೇಶಿಸಿದ್ದಾರೆ.
ಜನವರಿ 2, 2018 ರಂದು ಚುನಾವಣಾ ಬಾಂಡ್ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ.ಯೋಜನೆಯ ನಿಬಂಧನೆಗಳ ಪ್ರಕಾರ, ಭಾರತದ ನಾಗರಿಕರಾಗಿರುವ ಒಬ್ಬ ವ್ಯಕ್ತಿ ಅಥವಾ ಭಾರತದಲ್ಲಿ ಸಂಘಟಿತವಾಗಿರುವ ಸಂಸ್ಥೆ ಚುನಾವಣಾ ಬಾಂಡ್ ಖರೀದಿಸಬೌದು. ಅಲ್ಲದೆ ಒಬ್ಬನೇ ವ್ಯಕ್ತಿಯಾಗಲಿ, ಇತರರೊಡನೆ ಪಾಲುದಾರಿಕೆಯ ಮೂಲಕವಾಗಲಿ ಚುನಾವಣಾ ಬಾಂಡ್ ಖರೀದಿ ಮಾಡಬಹುದು.