ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಶತಮಾನ: ರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ಸ್ಮರಣೆ
ಅಮೃತಸರ್: ಪಂಜಾಬಿನ ಅಮೃತಸರ್ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು ಇಂದಿಗೆ 100 ವರ್ಷಗಳಾಗುತ್ತಿದೆ.1919ರ ಏಪ್ರಿಲ್ 13ರಂದು ಬ್ರಿಟೀಷರು ಭಾರತೀಯರ ಮೇಲೆ ನಡೆಸಿದ ಅಮಾನವೀಯ ಹೇಯ ದಾಳಿಗೆ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಶತಮಾನವೇ ಕಳೆದರೂ ಬಾರತೀಯರ ನೆನಪಲ್ಲಿ ಇದು ಮಾಸದ ಕಪ್ಪುಚುಕ್ಕಿಯಾಗಿ ಉಳಿದಿದೆ.
ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ನೂರು ವರ್ಷವಾಗಿರುವ ಹಿಇನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಟ್ವಿಟ್ಟರ್ ಮೂಲಕ ಮೃತರಿಗೆ ಗೌರವ ಸೂಚಿಸಿದ್ದಾರೆ.
"ಇಂದು 100 ವರ್ಷಗಳ ಹಿಂದೆ, ನಮ್ಮ ಪ್ರೀತಿಯ ಸ್ವಾತಂತ್ರ್ಯ ಯೋಧರು ಜಲಿಯನ್ ವಾಲಾಭಾಗ್ ನಲ್ಲಿ ಹುತಾತ್ಮರಾಗಿದ್ದರು, ಒಂದು ಭೀಕರವಾದ ಹತ್ಯಾಕಾಂಡ, ನಾಗರಿಕತೆಯ ಪಾಲಿಗೆ ಕೆಟ್ಟ ದೆಇನ ಅದಾಗಿತ್ತು. ಆ ದಿನದ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಅಂದಿನ ಗಂಬೀರ ದಾಳಿಯಲ್ಲಿ ಸಾವನ್ನಪ್ಪಿದ ಎಲ್ಲರಿಗೆ ನಮ್ಮ ನಮನಗಳು" ರಾಷ್ಟ್ರಪತಿ ಕೋವಿಂದ್ ಟ್ವೀಟ್ ಮಾಡಿದ್ದಾರೆ.
"ಇಂದು 100 ವರ್ಷಗಳ ಹಿಂದೆ ಭಯಾನಕ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ್ದೆ. ಆ ದಿನದಂದು ಹುತಾತ್ಮರಾದ ಎಲ್ಲರಿಗೆ ಭಾರತವು ಗೌರವವನ್ನು ನಿಡುತ್ತದೆ..ಅವರ ಶೌರ್ಯ ಮತ್ತು ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ..ಅವರು ಭಾರತವನ್ನು ನಿರ್ಮಿಸಲು ಇನ್ನೂ ಕಷ್ಟಪಟ್ಟು ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತಾರೆ. ಆ ಹುತಾತ್ಮ ಸ್ವಾತಂತ್ರ ಯೋಧರ ಬಗೆಗೆ ಹೆಮ್ಮೆ ಇದೆ" ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ ನಿಡಿ ಗೌರವ ಸಲ್ಲಿಸಿದರು
ಭಾರತದ ಬ್ರಿಟಿಷ್ ಹೈ ಕಮಿಷನರ್ ಭಾರತಕ್ಕೆ ಸರ್ ಡೊಮಿನಿಕ್ ಅಸ್ಕ್ವಿತ್ ಸಹ ಜಲಿಯನ್ ವಾಲಾಭಾಗ್ ಸ್ಮಾಅಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದಾರೆ.ಅಲ್ಲದೆ ಅಲ್ಲಿನ ಸಂದೇಶ ಪುಸ್ತಕದಲ್ಲಿ ಸಂದೇಶವನ್ನು ಬರೆದು , "100 ವರ್ಷಗಳ ಹಿಂದೆ ಜಲಿಯನ್ ವಾಲಾಬಾಗ್ ನಲ್ಲಿ ನಡೆದ ಘಟನೆ ಬ್ರಿಟಿಷ್-ಭಾರತೀಯ ಇತಿಹಾಸದಲ್ಲಿ ಅವಮಾನಕರವಾದ ಘಟನೆಯಾಗಿ ಉಳಿದಿದೆ. ಅಂದು ನಡೆದ ಆ ಘೋರ ದುರಂತಕ್ಕಾಗಿ ನಾವು ವಿಷಾದಿಸುತ್ತೇವೆ. 21 ನೇ ಶತಮಾನದಲ್ಲಿ ಭಾರತ ಅಭಿವೃದ್ದಿಯತ್ತ ಸಾಗುತ್ತಿದ್ದು ಯುಕೆ ಮತ್ತು ಭಾರತವು ಅಭಿವೃದ್ದಿಗಾಗಿ ಸಹಭಾಗಿತ್ವದ ಕುರಿತು ಬದ್ದತೆ ಪ್ರದರ್ಶಿಸುತ್ತಿರುವುದಕ್ಕೆ ನನಗೆ ಸಂತಸವಿದೆ" ಎಂದಿದ್ದಾರೆ.
ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಬ್ರಿಟಿಷ್ ಸಂಸತ್ತಿನಲ್ಲಿ ಈ ವಾರದ ಪ್ರಾರಂಭದ ದಿನ "1919 ರಲ್ಲಿ ಜಲಿಯನ್ ವಾಲಾಭಾಗ್ ದುರಂತವು ಬ್ರಿಟಿಷ್ ಭಾರತೀಯ ಇತಿಹಾಸದಲ್ಲೇ ಅಪಮಾನಕರ, ಇದೊಂದು ಮಾಸದ ಗಾಯವಾಗಿದೆ" ಎಂದು ಹೇಳಿದ್ದರು.
ಅದೇ ವೇಳೆ, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಶನಿವಾರ ಮಧ್ಯಾಹ್ನ ಅಮೃತಸರ್ ಗೆ ಆಗಮಿಸಲಿದ್ದು ಶತಮಾನದ ಘಟನೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos