ದೇಶ

ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿ ಗಾಯಗೊಂಡ ಮಹಿಳೆ

Sumana Upadhyaya
ನವದೆಹಲಿ: ದೆಹಲಿ ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಕ್ಕಿಹಾಕಿಕೊಂಡು ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ದೆಹಲಿ ಮೆಟ್ರೊ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ಸೀರೆ ಸಿಕ್ಕಿಹಾಕಿಕೊಂಡು ರೈಲು ಮುಂದೆ ಚಲಿಸಲು ಆರಂಭಿಸಿದ ಕಾರಣ ಮಹಿಳೆ ಪ್ಲಾಟ್ ಫಾರಂನಲ್ಲಿ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಯಿತು ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.
ಗೀತಾ ಮತ್ತು ನನ್ನ ಮಗಳು ನವಡಾದಿಂದ ಪ್ರಯಾಣಿಸುತ್ತಿದ್ದರು. ಮೋತಿ ನಗರ ಮೆಟ್ರೊ ನಿಲ್ದಾಣದಲ್ಲಿ ಪತ್ನಿ ಗೀತಾಳ ಸೀರೆ ರೈಲಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿತು. ಇದರಿಂದ ಕೆಲ ಮುಂದಿನವರೆಗೆ ಎಳೆದುಕೊಂಡು ಹೋಯಿತು. ಆಗ ಒಬ್ಬ ಪ್ರಯಾಣಿಕರು ರೈಲಿನ ತುರ್ತು ಬಟನ್ ಒತ್ತಿದಾಗ ರೈಲು ನಿಂತಿತು ಎಂದು ಪತಿ ಜಗದೀಶ್ ಪ್ರಸಾದ್ ತಿಳಿಸಿದ್ದಾರೆ.
SCROLL FOR NEXT