ದೇಶ

ನಮೋ ಟಿವಿ ಚುನಾವಣಾ ವಿಷಯ ಪ್ರಸಾರ ಮಾಡುವಂತಿಲ್ಲ: ಚುನಾವಣಾ ಆಯೋಗ

Lingaraj Badiger
ನವದೆಹಲಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಬಿಜೆಪಿ ಪ್ರಾಯೋಜಿತ ನಮೋ ಟಿವಿ ಚುನಾವಣಾ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ಸೂಚಿಸಿದೆ.
ಉಳಿದ ಆರು ಹಂತದ ಚುನಾವಣೆ ಮುಗಿಯುವವರೆಗೆ ನಮೋ ಟಿವಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಅನುಸರಿಸುತ್ತಿದೆಯೇ ಇಲ್ಲವೇ ಎನ್ನುವದನ್ನು ಖಚಿತಪಡಿಸಿಕೊಳ್ಳುವಂತೆ  ದೆಹಲಿ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.
ದೆಹಲಿ ಚುನಾವಣಾಧಿಕಾರಿ ನೋಡಲ್ ಅಧಿಕಾರಿಯಾಗಿರುವುದರಿಂದ ರಾಷ್ಟ್ರಿಯ ಮಟ್ಟದಲ್ಲಿನ ರಾಜಕೀಯ ವಿಷಯಗಳನ್ನು ಪ್ರಮಾಣಿಕರಿಸುವ ಸಲುವಾಗಿ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ವಿಶೇಷ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಜನಪ್ರತಿನಿಧಿ ಕಾಯ್ದೆಯ ವಿಭಾಗ 126 ಚುನಾವಣೆಯ 48 ಗಂಟೆಗಳ ಮೊದಲು ಸಿನೆಮಾಟೊಗ್ರಾಫ್, ದೂರದರ್ಶನ ಅಥವಾ ಇತರ ರೀತಿಯ ಉಪಕರಣದ ಮೂಲಕ ಚುನಾವಣಾ ವಿಷಯವನ್ನು ಪ್ರಸಾರ ಮಾಡುವುದನ್ನು ನಿಷೇಧಿಸುತ್ತದೆ.
ಈ ಅವಧಿಯನ್ನು ಮೌನದ ಕಾಲಾವಧಿ ಎಂದು ಕರೆಯಲಾಗುತ್ತದೆ. ಈ ವೇಳೆ ಮತದಾರ ಯಾವುದೇ ರೀತಿಯ ರಾಜಕೀಯ ಪ್ರಚಾರಕ್ಕೆ ಒಳಗಾಗದೆ ಮತ ಹಾಕಲು ಈ ಸಮಯ ಅವಕಾಶ ನೀಡುತ್ತದೆ. ಈಗ ಚುನಾವಣಾ ಆಯೋಗದ ನಿಯಮವನ್ನು ನಮೋ ಟಿವಿ ಪಾಲಿಸುತ್ತಿದೆಯೋ ಇಲ್ಲವೋ ಎನ್ನುವುದರ ಕುರಿತಾಗಿ ಅದು ಮತ್ತೊಮ್ಮೆ ಸ್ಪಷ್ಟನೆ ಕೇಳಿದೆ.
SCROLL FOR NEXT