ದೇಶ

ಭಾರತ ಮುಖ್ಯ ನ್ಯಾಯಮೂರ್ತಿ ಗೊಗೋಯ್ ವಿರುದ್ಧ ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ

Raghavendra Adiga
ನವದೆಹಲಿ: ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಕಿರಿಯ ಸಹಾಯಕಿಯಾಗಿದ್ದ ಮಹಿಳೆಯೊಬ್ಬರು ನ್ಯಾಯಾಲಯದ 22 ನ್ಯಾಯಾಧೀಶರಿಗೆ ಪತ್ರ ಬರೆದು ವಿವರಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ನ್ಯಾಯಾಧೀಶರ ಸ್ವಾತಂತ್ರ್ಯದ ಮೇಲೆ "ಮಹತ್ತರವಾದ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯ" ವನ್ನು ಕೇಳಲು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ವಿಶೇಷ ಪೀಠವನ್ನು ಶನಿವಾರ ರಚಿಸಲಾಯಿತು
ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳು ಗೋಗೊಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರ ನೇತೃತ್ವದಲ್ಲಿ ಈ ಪೀಠ ರಚನೆಯಾಗಿದೆ/
2018 ಅಕ್ಟೋಬರ್ 10,11ರಂದು  ಮುಖ್ಯ ನ್ಯಾಯಾಧೀಶ ಗೊಗೋಯ್ ತಮ್ಮ ಗೃಹ ಕಛೇರಿಯಲ್ಲಿ ನನ್ನ ಮೇಲೆ ಅಲಿಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಏಪ್ರಿಲ್ 19ಕ್ಕೆ ಮಹಿಳೆ ಪತ್ರ ಬರೆದು ತೀಲಿಸಿದ್ದಾರೆ.
ಆದರೆ ಸಂಬಂಧಪಟ್ಟ ಮಹಿಳೆ ಮಾಡಿದ ಎಲ್ಲ ಆರೋಪಗಳು ದುರ್ಬಲವಾಗಿರುತ್ತವೆ ಮತ್ತು ಇದಕ್ಕೆ ಯಾವ ಆಧಾರಗಳಿಲ್ಲ ಎಂದುಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಸಂಜೀವ್ ಸುಧಾಕರ್ಕಲ್ಗಾಂಕರ್ ಹೇಳಿದ್ದಾರೆ. "ನಿಸ್ಸಂದೇಹವಾಗಿ, ಇದು ಒಂದು ಅಪರೂಪದ ಆರೋಪವಾಗಿದೆ ಮತ್ತು ಈ ಕುರಿತ ವಿಚಾರಣೆ ಇದೀಗ ನಡೆಯುತ್ತಿದೆ.
ಈ ವಿಶೇಷ ಪೀಠದಲ್ಲಿ ಸಿಜೆಐ ಗೊಗೋಯ್ ಹಾಗೂ ನ್ಯಾಯಾಮೂರ್ತಿಗಳಾದ  ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ  ಅವರುಗಳಿದ್ದಾರೆ.
SCROLL FOR NEXT