ದೇಶ

ಲೈಂಗಿಕ ಕಿರುಕುಳ ಆಪಾದನೆಯ ಹಿಂದೆ ಬಹುದೊಡ್ಡ ಶಕ್ತಿಯ ಕೈವಾಡ , ನ್ಯಾಯಾಂಗದ ಸ್ವಾತಂತ್ರ್ಯ ಅಪಾಯದಲ್ಲಿ: ಗೊಗೋಯ್

Raghavendra Adiga
ನವದೆಹಲಿ:  ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಮಾಧ್ಯಮದ ಬುದ್ಧಿಮತ್ತೆಗೆ ಇದನ್ನು ಬಿಡುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮಂಡಳಿಯ ಸ್ವಾತಂತ್ರವು  'ತೀವ್ರವಾದ' ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು ಇದೀಗ ಈ ಸಂಬಂಧ ವಿಚಾರಣೆಯನ್ನು ನ್ಯಾಯಾಲಯ ಮುಕ್ತಾಯಗೊಳಿಸಿದೆ.
"ನಾನು ನ್ಯಾಯಪೀಠದಲ್ಲಿ ಕುಳಿತು ನನ್ನ ಕರ್ತವ್ಯವನ್ನು ಭಯವಿಲ್ಲದೆ ಮುಂದುವರಿಸುತ್ತೇನೆ. ನನ್ನ ಅಧಿಕಾರಾವಧಿಯು ಮುಗಿಯುವವರೆಗೆ  ನನ್ನನ್ನು ಯಾರೂ ಏನೇ ಕಾರಣಕ್ಕೆ ಖರೀದಿಸಲು ಬರುವುದಿಲ್ಲ.
ಈ ಸುದ್ದಿ  ಸತ್ಯದಿಂದ ಬಹುದೂರವಿದೆ. ನ್ಯಾಯಾಂಗವನ್ನು ಬಲಿಪಶುವಾಗಿ ಮಾಡುವ ಹುನ್ನಾರ ಇದರ ಹಿಂದಿದೆ, ಆದರೆ ಇದನ್ನು ಹಾಗೆ ಮಾಡಲು ಆಗುವುದಿಲ್ಲ. ಸ್ವತಂತ್ರವಾಗಿ ಉಳಿದಿದ್ದ ನ್ಯಾಯಾಂಗವನ್ನು ಅಸ್ಥಿರಗೊಳಿಸಲು ದೊಡ್ಡ ಪಿತೂರಿ ನಡೆದಿದೆ.ಈ ಮಹಿಳೆ ಮೇಲೆಯೂ ಹಿಂಸಾಚಾರ ನಡೆದಿದ್ದು ಈಗ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸುತ್ತಿದ್ದಾರೆ ಎಂದು ಗೊಗೋಯ್ ಹೇಳೀದ್ದಾರೆ.
 "ಇದು ನಂಬಲಾಗದ ಆರೋಪ, , 20 ವರ್ಷಗಳ ನಿಸ್ವಾರ್ಥ ಸೇವೆಯ ನಂತರ ನ್ಯಾಯಾಧೀಶನಾಗಿ ನೇಮಕವಾಗಿದ್ದು ನನ್ನ ಬ್ಯಾಂಕ್ ಬ್ಯಾಲೆನ್ಸ್  6.80 ಲಕ್ಷ ರು. ಆಗಿದೆ. ಹಣದಿಂದ ಯಾರೂ ನನ್ನನ್ನು ಖರೀದಿಸಲು ಬರುವುದಿಲ್ಲ.ಹಾಗಾಗಿ ಅವರು ಮತ್ತೇನಾದರೂ ದಾರಿ ಹುಡುಕಬೇಕು. ಈಗ ಇದನ್ನು ಹುಡುಕಿದ್ದಾರೆ." ಗೊಗೋಯ್ ಹೇಳಿದ್ದಾರೆ.
"ಸಿಜೆಐ ಕಛೇರಿಯನ್ನು ನಿಷ್ಕ್ರಿಯಗೊಳಿಸಲು ಅವರು ಬಯಸುತ್ತಿದ್ದಾರೆ, 20 ವರ್ಷಗಳ ಸೇವೆಯ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿಗೆ ಇಂತಹಾ ಉಡುಗೊರೆ ಸಿಕ್ಕುತ್ತಿದೆ" ಗೊಗೊಯ್ ಬೇಸರದಿಂದ ನುಡಿದರು.
SCROLL FOR NEXT