ದೇಶ

ಸಿಜೆಐ ವಿರುದ್ಧದ ಆರೋಪ ಷಡ್ಯಂತ್ರವೇ?: ನಿವೃತ್ತ ನ್ಯಾಯಮೂರ್ತಿ ಪಟ್ನಾಯಕ್ ನೇತೃತ್ವದ ಸಮಿತಿಯಿಂದ ತನಿಖೆ

Srinivas Rao BV
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಷಡ್ಯಂತ್ರವೇ ಎಂಬ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ. 
ಸುಪ್ರೀಂ ಕೋರ್ಟ್ ಏ.25 ರಂದು ಸಮಿತಿ ರಚನೆ ಮಾಡಿದ್ದು, ನ್ಯಾ.ಪಟ್ನಾಯಕ್ ಅವರು ಕೇಳಿದಾಗ ತನಿಖೆಗೆ ಸಹಕರಿಸಬೇಕೆಂದು ಸಿಬಿಐ, ಐಬಿ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ. 
ಸಿಜೆಐ ವಿರುದ್ಧದ ಆರೋಪ ಷಡ್ಯಂತ್ರದ ಭಾಗವೇ ಎಂಬುದನ್ನು ವಿಚಾರಣೆ ನಡೆಸುವುದಕ್ಕೆ ಮಾತ್ರ ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ನೇತೃತ್ವದ ಸಮಿತಿಯ ಕಾರ್ಯವ್ಯಾಪ್ತಿ ಇರಲಿದೆ. ಇದೇ ವೇಳೆ ಸಿಜೆಐ ವಿರುದ್ಧದ ಆರೋಪ ಷಡ್ಯಂತ್ರ ಎಂದು ಪ್ರತ್ಯಾರೋಪ ಮಾಡಿರುವ ವಕೀಲ ಉತ್ಸವ್ ಬೈನ್ಸ್ ಗೆ ಅವರ ಬಳಿ ಇರುವ ಸೂಕ್ತ ಸಾಕ್ಷ್ಯಾ ಧಾರಗಳನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. 
SCROLL FOR NEXT