ದೇಶ

ಜೈಲಿನಲ್ಲಿ ಕಿರುಕುಳ ತಾಳಲಾರದೆ ಸಾಧ್ವಿ ಪ್ರಗ್ಯಾ ಸಿಂಗ್ ಗೆ ಕ್ಯಾನ್ಸರ್ ಬಂತು: ಬಾಬಾ ರಾಮ್ ದೇವ್

Srinivasamurthy VN
ನವದೆಹಲಿ: ಜೈಲಿನಲ್ಲಿ ಅತಿಯಾದ ಕಿರುಕುಳದಿಂದಾಗಿಯೇ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಕ್ಯಾನ್ಸರ್ ಆರಂಭವಾಗಿತ್ತು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಉಪಸ್ಥಿತರಿದ್ದ ಬಾಬಾ ರಾಮದೇವ್, ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪರವಾಗಿ ಮಾತನಾಡುವ ಮೂಲಕ ಅವರ ಪರವಾಗಿಯೂ ಪರೋಕ್ಷ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಬಾಬಾ ರಾಮ್ ದೇವ್, 'ರಾಷ್ಟ್ರವಾದಿ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಒಂಬತ್ತು ವರ್ಷಗಳ ಕಾಲ ಸತತ ಕಿರುಕುಳ ನೀಡಿದ್ದರು. ಆ ಒತ್ತಡದಿಂದಲೇ ಕ್ಯಾನ್ಸರ್ ಕಾಯಿಲೆ ಆರಂಭವಾಗಿತ್ತು. ಯಾವ ತಪ್ಪೂ ಮಾಡದ ಸಾಧ್ವಿ ಅವರನ್ನು ಕೇವಲ ಶಂಕೆಯ ಮೇರೆಗೆ ಬಂಧನಕ್ಕೀಡು ಮಾಡಿದ್ದರು. ಅಲ್ಲದೆ ಅವರನ್ನು ಒಂಬತ್ತು ವರ್ಷ ಜೈಲಿನಲ್ಲಿಟ್ಟು ಹಿಂಸಿಸಲಾಗಿತ್ತು. ಅವರ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ಒತ್ತಡ ತಾಳಲಾರದೆ ಅವರು ಕ್ಯಾನ್ಸರ್ ಗೆ ತುತ್ತಾಗುವಂತಾಯಿತು ಎಂದು ಹೇಳಿದರು.
2008 ರ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಧ್ವಿ ಜಾಮೀನಿನ ಮೇಲೆ ಹೊರಬಂದಿದ್ದು, ಈ ಬಾರಿಯ ಲೋಕಸಬಾ ಚುನಾವಣೆಗೆ ಬಿಜೆಪಿ, ಸಾಂಧ್ವಿ ಅವರಿಗೆ ಮಧ್ಯಪ್ರದೇಶದ ಭೋಪಾಲ್ ನಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸಾಧ್ವಿ ಎದುರಿಸಲಿದ್ದಾರೆ.
SCROLL FOR NEXT