ತನಿಖೆನಿರತ ಪೊಲೀಸರು 
ದೇಶ

ಸಹೋದರಿ, ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ: ತಮ್ಮನನ್ನೇ ಹತ್ಯೆಗೈದ ಅಣ್ಣ

ಸಹೋದರಿ ಹಾಗೂ ತನ್ನ ಚಿಕ್ಮಮ್ಮನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ವಿಚಾರ ತಮ್ಮನಿಗೆ ತಿಳಿದ ಹಿನ್ನೆಲೆಯಲ್ಲಿ ಅಣ್ಣನೇ ತನ್ನ ತಮ್ಮನನ್ನು ಧಾರುಣವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ...

ವಿಲ್ಲುಪುರಂ: ಸಹೋದರಿ ಹಾಗೂ ತನ್ನ ಚಿಕ್ಮಮ್ಮನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ವಿಚಾರ ತಮ್ಮನಿಗೆ ತಿಳಿದ ಹಿನ್ನೆಲೆಯಲ್ಲಿ ಅಣ್ಣನೇ ತನ್ನ ತಮ್ಮನನ್ನು ಧಾರುಣವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ. 
ಶಿವಕುಮಾರ್ (15) ಹತ್ಯೆಯಾದ ಬಾಲಕ. ಶರತ್ ಕುಮಾರ್ (21) ತಮ್ಮನನ್ನು ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾನೆ. ಶರತ್ ಕುಮಾರ್ ಉಲುಂದುರ್ಪೇಟ್ ನ ಎಲವನ್'ಸುರ್ಕೋಟೈನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಕುಮಾರ್ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ. ಈತನ ತಂದೆ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಕೆಲ ದಿನಗಳ ಹಿಂದಿನಿಂದಲೂ ಶಿವಕುಮಾರ್ ನಾಪತ್ತೆಯಾಗಿದ್ದ. ಅರಣ್ಯ ಪ್ರದೇಶವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶಿವಕುಮಾರ್ ಮೃತದೇಹ ಪತ್ತೆಯಾಗಿತ್ತು. ಹತ್ಯೆಯನ್ನು ಮಾನವ ಬಲಿ ಎಂದು ಗ್ರಾಮಸ್ಥರು ಶಂಕಿಸಿದ್ದರು. ಇದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಹತ್ಯೆಯೆಂಬುದು ಖಚಿತಗೊಂಡಿದೆ. 
ತನಿಖೆಯಂತೆ ಪೊಲೀಸರು ಶಿವಕುಮಾರ್ ಮನೆ ಪರಿಶೀಲನೆ ನಡೆಸಿದಾಗ ಮನೆಯಲ್ಲಿ ರಕ್ತದ ವಾಸನೆ ಕಂಡು ಬಂದಿದೆ. ಇದರಂತೆ ಅನುಮಾನಾಸ್ಪದ ಮೇರೆಗೆ ಶಿವಕುಮಾರ್ ಸಹೋದರನನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಶರತ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. 
ಸಹೋದರಿ ಸೌಂದರ್ಯ (18) ಹಾಗೂ ಚಿಕ್ಕಮ್ಮ ಪುಷ್ಮಾವತಿ (40)ಯೊಂದಿಗೆ ಶರತ್ ಕುಮಾರ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ಶಿವಕುಮಾರ್'ಗೆ ತಿಳಿದಿತ್ತು. ವಿಚಾರ ಬಹಿರಂಗಗೊಳ್ಳುವ ಭಯದಿಂದ ತಮ್ಮನನ್ನು ಹತ್ಯೆ ಮಾಡಿರುವುದಾಗಿ ಶರತ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. 
ಮೊಲವನ್ನು ಬೇಟೆಯಾಡುವ ಸಲುವಾಗಿ ತಮ್ಮನನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಶಿವಕುಮಾರ್ ಕತ್ತು ಸೀಳಿ ಹತ್ಯೆ ಮಾಡಿರುವುದಾಗಿ ಶರತ್ ಕುಮಾರ್ ತಿಳಿಸಿದ್ದಾನೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT