ತೇಜ್ ಪ್ರತಾಪ್ ಯಾದವ್ 
ದೇಶ

ತೇಜ್ ಪ್ರತಾಪ್ ಮಾದಕ ವ್ಯಸನಿ; ರಾಧೆಯಂತೆ ಕಾಣಲು ಬ್ಲೌಸ್, ಮೇಕಪ್, ಏರ್ ವಿಗ್ ಬಳಕೆ: ಪತ್ನಿ ಐಶ್ವರ್ಯಾ

ಬಿಹಾರದ ಮಾಜಿ ಆರೋಗ್ಯ ಸಚಿವ ಹಾಗೂ ಲಾಲೂ ಪ್ರಸಾದ್ ಯಾದವ್ , ರಾಬ್ಡಿದೇವಿ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮಾದಕ ವ್ಯಸನಿಯಾಗಿದ್ದು, ಕಿರುಕುಳ ನೀಡುತ್ತಿದ್ದಾಗಿ ಆತನಿಂದ ವಿಚ್ಚೇದನಾ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಪತ್ನಿ ಐಶ್ವರ್ಯಾ ಆರೋಪಿಸಿದ್ದಾರೆ.

ಪಾಟ್ನಾ: ಬಿಹಾರದ ಮಾಜಿ ಆರೋಗ್ಯ ಸಚಿವ ಹಾಗೂ ಲಾಲೂ ಪ್ರಸಾದ್ ಯಾದವ್ , ರಾಬ್ಡಿದೇವಿ ಅವರ ಹಿರಿಯ ಪುತ್ರ ತೇಜ್ ಪ್ರತಾಪ್  ಯಾದವ್ ಮಾದಕ ವ್ಯಸನಿಯಾಗಿದ್ದು,  ಕಿರುಕುಳ ನೀಡುತ್ತಿದ್ದಾಗಿ ಆತನಿಂದ ವಿಚ್ಚೇದನಾ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ  ಪತ್ನಿ ಐಶ್ವರ್ಯಾ ಆರೋಪಿಸಿದ್ದಾರೆ.
ತೇಜ್ ಪ್ರತಾಪ್ ಮಾದಕ ವಸ್ತುವನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ಇದರ ಪ್ರಭಾವದಿಂದ ಶಿವನ ಅವತಾರ ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ದೂರಿದ್ದಾರೆ. 
ರಾಧೆ, ಕೃಷ್ಣಾನ ರೀತಿಯ ವಸ್ತ್ರಗಳನ್ನು ತೇಜ್ ಬಳಸುತ್ತಾರೆ.ಮದುವೆಯಾದ ನಂತರ ಇದನ್ನು ಪತ್ತೆ ಮಾಡಿದೆ. ರಾಧೆಯಂತೆ ಕಾಣಲು ಬ್ಲೌಸ್ ಧರಿಸುತ್ತಾರೆ. ಮೇಕಪ್ ಆಪ್ , ಏರ್ ವಿಗ್ ಮಾಡಿಸಿಕೊಳ್ಳುತ್ತಾರೆ ಎಂದು ಐಶ್ವರ್ಯಾ ಆರೋಪಿಸಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಹಿರಿಯ ಮಗ ತೇಜ್ ಪ್ರತಾಪ್ ಹಾಗೂ ಐಶ್ವರ್ಯಾ ಮದುವೆ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿತ್ತು. ತೇಜ್ ಪ್ರತಾಪ್ ನಡವಳಿಕೆ ಬಗ್ಗೆ ತಮ್ಮ ಅತ್ತೆ ಹಾಗೂ ನಾದಿನಿ ಜೊತೆಗೆ ಮಾತನಾಡಿದ್ದರೂ ಆತ ಈ ರೀತಿಯ ವರ್ತನೆಯನ್ನು ಮಾಡುವುದಿಲ್ಲ ಎಂಬ ಭರವಸೆ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಗಾಂಜಾ ಸೇವನೆ ನಿಲ್ಲಿಸುವಂತೆ ಹೇಳಿದರೆ ಇದು ಶಿವನ ಪ್ರಸಾದ. ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳುವ ತೇಜ್ ಪ್ರತಾಪ್, ಯಾವಾಗಲೂ ರಾಧಾ ಜೈ, ಕೃಷ್ಣ ಜೈ ಅನ್ನುತ್ತಿರುತ್ತಾರೆ. ಶೈಕ್ಷಣಿಕ ಹಿನ್ನೆಲೆಯಲ್ಲಿ  ಹೀಯಾಳಿಸಿ ಮನೆಯಲ್ಲಿ ಅಡುಗೆ ಮಾಡಿಕೊಂಡು, ಮಕ್ಕಳನ್ನು ಮಾಡಿಕೊಂಡು ಇರುವಂತೆ ಕಿರುಕುಳ ನೀಡುತ್ತಾರೆ.ಆತ ಹಾಗೂ ಆತನ ಕುಟುಂಬದಿಂದ ತಮ್ಮ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯವೆಸಗಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 
ವಿವಾಹವಾಗಿ ಐದು ತಿಂಗಳು ಕಳೆದ ನಂತರ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ತೇಜ್ ಪ್ರತಾಪ್ ಪಾಟ್ನಾ ನ್ಯಾಯಾಲಯದಲ್ಲಿ ವಿಚ್ಚೇದನಾ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ: Exit Poll Results; ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ

Red Fort blast: ಮೃತರ ಸಂಬಂಧಿಕರಿಗೆ ರೂ.10 ಲಕ್ಷ, ಗಂಭೀರ ಗಾಯಾಳುಗಳಿಗೆ ರೂ. 2 ಲಕ್ಷ ಪರಿಹಾರ ಘೋಷಿಸಿದ ರೇಖಾಗುಪ್ತಾ!

Delhi Blast: ಆಪರೇಷನ್ ಸಿಂಧೂರ್ ಗೆ ಸೇಡು? 20 ಟೈಮರ್, 3000 ಕೆಜಿ ಸ್ಫೋಟಕ..; ಉಗ್ರರ ಯೋಜನೆ ಕಾರ್ಯಗತವಾಗಿದ್ದರೆ ಅತಿದೊಡ್ಡ ಭಯೋತ್ಪಾದಕ ದಾಳಿ!

Delhi blast ಖಂಡಿಸಿದ ವಿಶ್ವ ನಾಯಕರು; ಅಮೆರಿಕ, ಚೀನಾ ಸೇರಿ ವಿವಿಧ ದೇಶಗಳಿಂದ ಕಳವಳ

Delhi Blast: ದೇಹದ ಮಾದರಿ ಮ್ಯಾಚ್ ಮಾಡುವಂತೆ ವಿಧಿವಿಜ್ಞಾನ ತಜ್ಞರಿಗೆ ಅಮಿತ್ ಶಾ ಸೂಚನೆ

SCROLL FOR NEXT