ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಪ್ರತಿ 100 ದಿನಗಳಿಗೊಮ್ಮೆ ಸರ್ಕಾರದ ಪ್ರಮುಖ ಯೋಜನೆಗಳ ವರದಿ ಕೊಡಿ: ಪ್ರಧಾನ ಮಂತ್ರಿ ಕಚೇರಿ ಆದೇಶ

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲು ಸಂಬಂಧಪಟ್ಟ ಸಚಿವಾಲಯಗಳು ಯೋಜನೆಗಳ ನಿಗದಿತ ವರದಿಗಳನ್ನು ...

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲು ಸಂಬಂಧಪಟ್ಟ ಸಚಿವಾಲಯಗಳು ಯೋಜನೆಗಳ ನಿಗದಿತ ವರದಿಗಳನ್ನು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಬೇಕೆಂದು ಆದೇಶ ನೀಡಲಾಗಿದೆ. 
ಯೋಜನೆಗಳನ್ನು ನಿರಂತರವಾಗಿ ನಿಗಾವಹಿಸುವುದು ಮಾತ್ರವಲ್ಲದೆ ಪ್ರಮುಖ ಯೋಜನೆಗಳ ವರದಿ ಕಾರ್ಡುಗಳನ್ನು ಸರ್ಕಾರ 100 ದಿನಗಳೊಳಗೆ ಸಲ್ಲಿಸಲಿದೆ.
ಹಿಂದಿನ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಚಿವಾಲಯಗಳ ವರದಿ ಕಾರ್ಡುಗಳನ್ನು ಯೋಜನೆಗಳು ಆರಂಭವಾಗಿ ಒಂದು ವರ್ಷವಾದ ನಂತರ ಸಲ್ಲಿಸಲಾಗುತ್ತಿತ್ತು. ಈ ಬಾರಿಯ ಸರ್ಕಾರದಲ್ಲಿ ಅದನ್ನು ಪ್ರತಿ 100 ದಿನಗಳಿಗೊಮ್ಮೆ ಮಾಡಲಾಗುತ್ತದೆ. ಯೋಜನೆಗಳ ಹೊಸ ಗುರಿಯನ್ನು ಅದರ ಪ್ರಕಾರ ನಿಗದಿಪಡಿಸಿ ಯೋಜನೆಗಳ ವರದಿಗಳನ್ನು ಅಪ್ ಡೇಟ್ ಮಾಡಿ ನಿಗದಿತ ವಿರಾಮಗಳಲ್ಲಿ ವರದಿಗಳನ್ನು ಸಲ್ಲಿಸಲಾಗುತ್ತದೆ. 
ಸರ್ಕಾರದ ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವತ್ತ ಸರ್ಕಾರ ಒತ್ತು ನೀಡುತ್ತಿದ್ದು, ಸಚಿವಾಲಯಗಳು ಮತ್ತು ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುವಂತೆ ಹೇಳಲಾಗಿದೆ. ಪ್ರಮುಖ ಯೋಜನೆಗಳು ಏನು, ಎಲ್ಲಿ ಮತ್ತು ಯಾವಾಗ ಎಂದು ವಿವರ ತಯಾರಿಸುವಂತೆ ಹೇಳಲಾಗಿದೆ. ಯೋಜನೆಗಳ ಗುರಿ ಮತ್ತು ಅವಕಾಶ ವಿವರಗಳನ್ನು ವರದಿಗಳಲ್ಲಿ ವಿವರಿಸಿ ಅವುಗಳನ್ನು ಪೂರ್ಣಗೊಳಿಸುವ ಸಂಬಂಧ ಮತ್ತು ಅವುಗಳಿಂದ ಆಗುವ ಪರಿಣಾಮಗಳ ಹಂತಗಳನ್ನು ವರದಿಯಲ್ಲಿ ವಿವರ ನೀಡುವಂತೆ ಸೂಚಿಸಲಾಗಿದೆ.
ಮುಂದಿನ ಕೆಲ ತಿಂಗಳಲ್ಲಿ ಪೂರ್ಣಗೊಳ್ಳುವ ಯೋಜನೆಗಳ ಬಗ್ಗೆ ಕೂಡ ವಿವರ ನೀಡುವಂತೆ ಸಚಿವಾಲಯಗಳಿಗೆ ಸರ್ಕಾರ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT