ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ-ಬಾಬರಿ ಮಸೀದಿ ಪರವಾದಿಗಳಾದ ಹಿಂದೂ ಮತ್ತು ಮುಸ್ಲಿಂ ಎರಡು ಧರ್ಮದವರು ಅಯೋಧ್ಯೆ ರಾಮನ ಜನ್ಮಸ್ಥಳವೆಂದು ಪರಿಗಣಿಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್ ಗೆ ರಾಮ್ ಲಾಲ್ಲಾ ವಿರಾಜ್ ಮನ್ ಪರ ವಕೀಲರು ಅಯೋಧ್ಯೆಯನ್ನು ಭಗವಾನ್ ರಾಮನ ಜನ್ಮಸ್ಥಳವೆಂದು ಪರಿಗಣಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ರಾಮ್ ಲಾಲ್ಲಾ ಪರ ವಕೀಲ ಕೆ. ಪರಾಸರನ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೋಗೊಯ್ ನೇತೃತ್ವದ ಪಂಚ ಪೀಠಕ್ಕೆ ಇದನ್ನು ಜನ್ಮಸ್ಥಳ( ಜನ್ಮಸ್ಥಳ''''' ಕೇವಲ ಸ್ಥಳವನ್ನು ಅರ್ಥೈಸುವ ಅಗತ್ಯವಿಲ್ಲ. ಒಟ್ಟಾರೆ ಇಡೀ ಸುತ್ತಮುತ್ತಲಿನ ಪ್ರದೇಶಗಳನ್ನು ಅರ್ಥೈಸಬಹುದು ಎಂದು ಹೇಳಿದರು.
ಇನ್ನು 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿದ ಪರಾಸರನ್, ವಿವಾದಿತ 2.77 ಎಕರೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ನಿರ್ಮೋಹಿ ಅಖರಾ ಪಂಥಕ್ಕೆ, ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಉತ್ತರ ಪ್ರದೇಶ ಮತ್ತು ರಾಮಲಲ್ಲಾ ವಿರಾಜ್ ಮಾನ್ ಗೆ ನೀಡಿತ್ತು ಎಂದರು.
ನಿನ್ನೆಯ ವಿಚಾರಣೆ ವೇಳೆ, ರಾಮಲಲ್ಲಾ ವಿರಾಜಮಾನ್ ಎಂಬ ಸ್ಥಳವನ್ನು ಕಕ್ಷಿದಾರ ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ದೇವರು ಹುಟ್ಟಿದ್ದು ಎಂದು ಹೇಳಲಾಗುವ ಸ್ಥಳವನ್ನು ಪ್ರಕರಣದಲ್ಲಿ ಹಿತಾಸಕ್ತಿ ಹೊಂದಿರುವ ಕಕ್ಷಿದಾರ ಎನ್ನಲು ಸಾಧ್ಯವೇ ಎಂದು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠ ಕೇಳಿತು.
ಇದಕ್ಕೆ ಪರಾಶರನ್ ಅವರು ಹಿಂದೂ ಧರ್ಮದಲ್ಲಿ ಸ್ಥಳವೊಂದನ್ನು ಪವಿತ್ರ ಎಂದು ಪರಿಗಣಿಸಲು ಪ್ರತಿಮೆಯೇ ಇರಬೇಕೆಂದಿಲ್ಲ. ನದಿಗಳು ಮತ್ತು ಸೂರ್ಯನನ್ನು ಕೂಡ ಇಲ್ಲಿ ಪೂಜಿಸಲಾಗುತ್ತಿದೆ. ಹಾಗಾಗಿ ಜನ್ಮಸ್ಥಳವನ್ನು ಕಕ್ಷಿದಾರ ಎಂದು ಪರಿಗಣಿಸಬಹುದು ಎಂದು ನ್ಯಾಯ ಪೀಠಕ್ಕೆ ತಿಳಿಸಿದರು.
ಗಂಗಾ ನದಿಯನ್ನು ಕಕ್ಷಿದಾರ ಎಂದು ಪರಿಗಣಿಸಿ ಉತ್ತರಾಖಂಡ ಹೈಕೋರ್ಟ್ ಕೊಟ್ಟಿದ್ದ ತೀರ್ಪನ್ನು ಪೀಠವು ಉಲ್ಲೇಖಿಸಿತು. ತಮ್ಮ ವಾದ ಮಂಡಿಸಲು ಪರಾಶರನ್ ಅವರಿಗೆ ಪೀಠವು ಅವಕಾಶ ಕೊಟ್ಟಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos