ದೇಶ

370ನೇ ವಿಧಿ ರದ್ದು: ರಾಷ್ಟ್ರಪತಿ ಆದೇಶವನ್ನೇ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಎನ್‌ಸಿ

Raghavendra Adiga

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು 370 ನೇ ವಿಧಿ ರದ್ದುಪಡಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ ಬೆನ್ನಲ್ಲೇ ರಾಷ್ಟ್ರಪತಿ ಆದೇಶವನ್ನೇ ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ ಶನಿವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.


ಎನ್‌ಸಿ ನಾಯಕರಾದ ಮೊಹಮ್ಮದ್ ಅಕ್ಬರ್ ಲೋನ್ ಮತ್ತು ಹಸನೈನ್ ಮಸೂದಿ  ಸಲ್ಲಿಸಿದ್ದ ಅರ್ಜಿಯಲ್ಲಿ 370 ನೇ ವಿಧಿಗೆ ಸಂಬಂಧಿಸಿದ ರಾಷ್ಟ್ರಪತಿ  ಆದೇಶವನ್ನು  "ಅಸಂವಿಧಾನಿಕ, ಅನೂರ್ಜಿತ" ಎಂದು ಹೇಳಿದ್ದು ಕಾಶ್ಮೀರದಲ್ಲಿ ಈ ಆದೇಸ ಜಾರಿಗೆ ಸುಪ್ರೀಂ ಕೋರ್ಟ್ ತಡೆ ನೀಡಬೇಕೆಂದು ಕೋರಲಾಗಿದೆ.


ಜಮ್ಮು ಮತ್ತು ಕಾಶ್ಮೀರ ಮರುರಚನೆ ಕಾಯ್ದೆ, 2019 ಅನ್ನು "ಅಸಂವಿಧಾನಿಕ" ಎಂದು ಘೋಷಿಸಲು ಎನ್‌ಸಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.

SCROLL FOR NEXT