ದೇಶ

ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳ ಸಿಬಿಎಸ್ ಇ ಪರೀಕ್ಷಾ ಶುಲ್ಕ 24 ಪಟ್ಟು ಹೆಚ್ಚಳ, ಕಾಂಗ್ರೆಸ್ ಖಂಡನೆ

Lingaraj Badiger

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 10 ಹಾಗೂ 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು 24 ಪಟ್ಟು ಹೆಚ್ಚಳ ಮಾಡಿದ ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಇ)ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ಮಾಧ್ಯಮ ಉಸ್ತುವಾರಿ ರಂದೀಪ್ ಸುರ್ಜೇವಾಲ, ಕಳೆದ ಆರು ವರ್ಷಗಳಿಂದ ಬಿಜೆಪಿ ಸರ್ಕಾರ ಬುಡಕಟ್ಟು ಸಮುದಾಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ದಲಿತರು ರಾಜಕೀಯ ಅನಾದರ ಹಾಗೂ ಸಾಮಾಜಿಕ ಅನ್ಯಾಯಕ್ಕೆ ಗುರಿಯಾಗುತ್ತಿದ್ದಾರೆ. ಈಗ ಮತ್ತೊಮ್ಮೆ ಸಂವೇದನಾರಹಿತ ಸರ್ಕಾರ ದಲಿತರ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಅಡ್ಡಗಾಲು ಹಾಕಿದೆ ಎಂದು ಆರೋಪಿಸಿದ್ದಾರೆ.

ಸಿಬಿಎಸ್ ಇ, ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳ 10 ಹಾಗೂ 12ನೇ ತರಗತಿಗಳ ಮಂಡಳಿ ಪರೀಕ್ಷಾ ಶುಲ್ಕವನ್ನು 24 ಪಟ್ಟು ಹೆಚ್ಚಿಸಿದೆ. ಅವರು ಈಗ 50 ರೂ. ಬದಲಿಗೆ 1,200 ರೂ. ಶುಲ್ಕಪಾವತಿಸಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಶುಲ್ಕವನ್ನು ಶೇ. 100ರಷ್ಟು ಹೆಚ್ಚಿಸಲಾಗಿದೆ. ಅವರು 750 ರೂ. ಬದಲಿಗೆ 1500 ರೂ. ಪಾವತಿಸಬೇಕಿದೆ. ಈ ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಸರ್ಕಾರ ಬಾಬಾ ಸಾಹೆಬ್ ಅಂಬೇಡ್ಕರ್ ಅವರು ದಲಿತರ ಕುರಿತು ಹೊಂದಿದ್ದ ದೃಷ್ಟಿಕೋನವನ್ನು ಮತ್ತೊಮ್ಮೆ ನಾಶಮಾಡಲು ಮುಂದಾಗಿದೆ ಎಂಬುದು ಸಾಬೀತಾಗುತ್ತದೆ ಎಂದಿದ್ದಾರೆ.

SCROLL FOR NEXT