ದೇಶ

ಕೇರಳ ಪ್ರವಾಹ: ಮೃತರ ಸಂಖ್ಯೆ 72ಕ್ಕೆ ಏರಿಕೆ, 50 ಜನರ ಕಣ್ಮರೆ, ಪರಿಹಾರ ನಿಧಿ ದುರ್ಬಳಕೆಯಾಗಿಲ್ಲ- ಮುಖ್ಯಮಂತ್ರಿ

Nagaraja AB

`ಕೊಚ್ಚಿ: ಕಳೆದ ನಾಲ್ಕು ದಿನಗಳಿಂದಲೂ ಕೇರಳದಲ್ಲಿ ತೀವ್ರವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂ ಕುಸಿತದಿಂದಾಗಿ ಮೃತಪಟ್ಟರ ಸಂಖ್ಯೆ 72ಕ್ಕೆ ಏರಿಕೆ ಆಗಿದೆ. 50 ಜನರು ಕಣ್ಮರೆಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ಮಳೆ ಸ್ವಲ್ಪ ಕಡಿಮೆಯಾಗಬಹುದೆಂದು ಕೇರಳ ವಿಕೋಪ ನಿರ್ವಹಣಾ ಪ್ರಾಧಿಕಾರಿ ಮುನ್ಸೂಚನೆ ನೀಡಿದ್ದು, ಕಾಸರಗೋಡು, ಕಣ್ಣೂರು, ವೈನಾಡು, ಮಲ್ಲಾಪುರಂ, ಕೋಝಿಕೋಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಆಲರ್ಟ್ ಘೋಷಿಸಲಾಗಿದೆ. 

ಕೊಚ್ಚಿ ವಿಮಾನ ನಿಲ್ದಾಣವನ್ನು ಗುರುವಾರ ಸಂಜೆಯಿಂದಲೂ ಮುಚ್ಚಲಾಗಿದೆ. ಬಹುತೇಕ ರಸ್ತೆ ಹಾಗೂ ರೈಲು ಸಂಚಾರ ಭಾನುವಾರದಿಂದ ಆರಂಭವಾಯಿತು.

ಆದಾಗ್ಯೂ, ಮಳೆಯಿಂದಾಗಿ ನೂರಾರು ಜನರು ಮನೆ ಕಳೆದುಕೊಂಡಿದ್ದಾರೆ. ರಾಜ್ಯಾದ್ಯಂಕ 1639 ಪರಿಹಾರ ಕೇಂದ್ರಗಳಲ್ಲಿ ಸುಮಾರು 2.5 ಲಕ್ಷ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ದುರ್ಬಳಕೆಯಾಗಿದೆ ಎಂಬ ವರದಿಗಳನ್ನು ನಂಬಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹೇಳಿದ್ದಾರೆ.

ಕೇರಳದಲ್ಲಿ ನೆರೆಯಿಂದಾಗಿ ಸುಮಾರು 3 ಸಾವಿರ ಮನೆಗಳಿಗೆ ಹಾನಿಯಾಗಿದೆ. 72 ಜನರು ಸಾವನ್ನಪ್ಪಿದ್ದು, 58 ಜನ ಕಣ್ಣರೆಯಾಗಿದ್ದಾರೆ. 32 ಮಂದಿ ಗಾಯಗೊಂಡಿದ್ದಾರೆ ಕಾಂಗ್ರೆಸ್ ಮುಖಂಡ ಶಶಿ ತರೂರು ಟ್ವೀಟ್ ಮಾಡಿದ್ದಾರೆ.


 ವೈನಾಡಿನ ಮೆಪ್ಪಾಡಿಯಲ್ಲಿ ನೂರು ಎಕರೆ ಟೀ ತೋಟ, ಮಸೀದಿ, ದೇವಸ್ಥಾನಗಳು, ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ನೆಲಕಚ್ಚಿವೆ. ನಿನ್ನೆ ದಿನ ಮೃತದೇಹವೊಂದು ಸಿಕ್ಕಿದ್ದು, ಇನ್ನೂ ಎಂಟು ಮಂದಿ ಕಣ್ಮರೆಯಾಗಿದ್ದಾರೆ.75 ಜನರನ್ನು ರಕ್ಷಿಸಲಾಗಿದೆ. 

SCROLL FOR NEXT