ದೇಶ

ಪ್ರಾಣಿಗಳಂತೆ ನಮ್ಮನ್ನು ಕೂಡಿ ಹಾಕಿದ್ದೇಕೆ?-ಮೆಹಬೂಬಾ ಮುಫ್ತಿ ಪುತ್ರಿಯಿಂದ ಅಮಿತ್ ಶಾಗೆ ಪತ್ರ

Raghavendra Adiga

ನವದೆಹಲಿ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಜಾವೇದ್ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರ ಮತ್ತು ಪ್ರಮುಖ ನಾಯಕರ ಗೃಹಬಂಧನದಲ್ಲಿರಿಸಿದ ಕ್ರಮವನ್ನು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಯವರ ಮಗಳು ಆಗಸ್ಟ್ 5 ರಿಂದ ಶ್ರೀನಗರದಗುಪ್ಕರ್ ರಸ್ತೆ ನಿವಾಸದಲ್ಲಿ ಗೃಹಬಂಧನದಲ್ಲಿದ್ದಾರೆ. ಅದೇ ದಿನ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ರಾಜಕೀಯ ಮುಖಂಡರೊಂದಿಗೆ ಮೆಹಬೂಬಾ ಮುಫ್ತಿ ಅವರನ್ನು ಬಂಧನದಲ್ಲಿಡಲಾಗಿತ್ತು. 

ಇಲ್ಟಿಜಾ ಜಾವೇದ್ ಮುಫ್ತಿಯನ್ನು ಯಾಕೆ ಬಂಧಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಹೋದ ಕಾರಣ ಶಾ ಅವರಿಗೆ ಪತ್ರ ಬರೆವ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ಹೇಳಿದ್ದಾರೆ.ಕಳೆದೊಂದು ವಾರದಿಂದ ಕಾಶ್ಮೀರಿಗಳು ಹತಾಶರಾಗಿದ್ದಾರೆ ಎಂದು ಅವರು ಹೇಳುತ್ತಾರೆ.

"ಇಂದು ದೇಶದ ಉಳಿದ ಭಾಗವು ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಕಾಶ್ಮೀರಿಗಳನ್ನು ಪ್ರಾಣಿಗಳಂತೆ ಕೂಡಿಹಾಕಲಾಗಿದೆ.ಅದರೊಡನೆ ಅವರ ಮೂಲಭೂತ ಮಾನವ ಹಕ್ಕುಗಳಿಗೆ ಚ್ಯುತಿಯಾಗಿದೆ"

ತನ್ನನ್ನು ಭೇಟಿ ಮಾಡಲು ಸಂದರ್ಶಕರಿಗೆ ಅವಕಾಶವಿಲ್ಲ, ನಾನು ಯಾವ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲವಾದರೂ ಹೀಗೇಕೆ ಮಾಡುತ್ತಿದ್ದೀರಿ ಎಂದು ಅವರು ಪತ್ರದಲ್ಲಿ ಕೇಳಿದ್ದಾರೆ.

ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಿಂದಾಗಿ ಅವರನ್ನು ಬಂಧಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಹೇಳೀದ್ದಾರೆ. ಆಗಸ್ಟ್ 6 ರಂದು, ಇಲ್ಟಿಜಾ ಕೇಂದ್ರದ ನಿರ್ಧಾರಗಳನ್ನು "ಸಂಪೂರ್ಣಪ್ರಜಾಪ್ರಭುತ್ವ ವಿರೋಧಿ" ಎಂದು ಕರೆದರು ಮತ್ತು ತಾಯಿಯ ಬಂಧನವು "ಅವಳ ಉತ್ಸಾಹವನ್ನು ಚೂರಾಗಿಸುತ್ತದೆ" ಎಂದು ಹೇಳಿದರು.

SCROLL FOR NEXT