ದೇಶ

ಮಧ್ಯಪ್ರದೇಶ: ಕಾಲುವೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಅಂಗಡಿಗಳು!ವಿಡಿಯೋ

Nagaraja AB

ನೀಮ್ಯೂಚ್: ಮಧ್ಯ ಪ್ರದೇಶದ ನೀಮ್ಯೂಚ್ ನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿವೆ.
 
ಮಳೆಯ ರಭಸಕ್ಕೆ ಕಾಲುವೆಯೊಂದರ ನೀರು ಹೆಚ್ಚಾದ ಕಾರಣ  ಹಿಂಬಾಗದಲ್ಲಿನ  ತಡೆಗೋಡೆ ಕುಸಿದು ಬಿದ್ದು, ಅಂಗಡಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಮತ್ತೊಂದೆಡೆ ರಾಯಘಡ ಜಿಲ್ಲೆಯಲ್ಲಿ ಸೇತುವೆ ದಾಟುತ್ತಿರುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹವನ್ನು ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ. ಆದರೆ, ಮೃತ ಯಾರು ಎಂಬುದು ತಿಳಿದುಬಂದಿಲ್ಲ.

ಮಧ್ಯ ಪ್ರದೇಶದ ದಕ್ಷಿಣ ಹಾಗೂ ಕೇಂದ್ರಿಯ ಪ್ರಾಂತೀಯದಲ್ಲಿ ಕಳೆದ 24 ಗಂಟೆಗಳಿಂದ ತೀವ್ರ ಮಳೆಯಾಗುತ್ತಿದೆ. 

SCROLL FOR NEXT