ದೇಶ

ಮಸೀದಿ ನಿರ್ಮಾಣಕ್ಕಾಗಿ ರಾಮಮಂದಿರ ನಾಶ-ಸುಪ್ರೀಂ ನಲ್ಲಿ ರಾಮ್ ಲಲ್ಲಾ ವಕೀಲರಿಂದ ಉಲ್ಲೇಖ 

Raghavendra Adiga

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ನಲ್ಲಿ ನಿರಂತರ ವಿಚಾರಣೆ ನಡೆಯುತ್ತಿದೆ.ಮಂಗಳವಾರ ನಡೆದ ವಿಚಾರಣೆ ವೇಳೆ ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಅಯೋಧ್ಯೆಯ ಹಿಂದೂ ದೇವಾಲಯವನ್ನು ಧ್ವಂಸ ಮಾಡಲಾಗಿದೆ ಎಂದು ಪ್ರಕರಣದ ಕುರಿತ ಪ್ರಮುಖ ಅರ್ಜಿದಾರರಾದ ರಾಮ್ ಲಲ್ಲಾ ವಿರಾಜಮಾನ್ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಎಎಸ್ಐ ವರದಿಯನ್ನು ಉಲ್ಲೇಖಿಸಿ ವಾದ ಮಂಡಿಸಿದ ಅವರು ಎಎಸ್ಐ ವರದಿಯು ಮುಸ್ಲಿಂ ಸಂಸ್ಕೃತಿಗೆ ಹೊರತಾದ ಮೊಸಳೆಗಳು ಮತ್ತು ಆಮೆಗಳ ಚಿತ್ರವು ಮಸೀದಿಯಲ್ಲಿರುವುದನ್ನು ಅಂಕಿ ಸಂಖ್ಯೆಗಳ ಸಮೇತ ಹೇಳುತ್ತಿದೆ ಎಂದಿದ್ದಾರೆ.

ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ರಾಮ್ ರಾಮ್ ಲಲ್ಲಾ ಪರ ವಾದ ಮಂಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಕರಣದ ಎಂಟನೇ ದಿನದ ವಿಚಾರಣೆಯ ಸಂದರ್ಭದಲ್ಲಿ  ಅವರು ವಾದ ಮುಂದುವರಿಸಿದ್ದಾರೆ.

ಹಿರಿಯ ವಕೀಲರು ಎಎಸ್ಐನ ವರದಿಯಿಂದ ಇತರ ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಉಲ್ಲೇಖಿಸಿ ವಿವಾದಿತ ಪ್ರದೇಶದಲ್ಲಿ ಹಿಂದೂ ದೇವಾಲಯವೊಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್ ಎ ಬಾಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ.

SCROLL FOR NEXT