ದೇಶ

ಐಎನ್ಎಕ್ಸ್ ಮೀಡಿಯಾಪ್ರಕರಣ: ಇಡಿ, ಸಿಬಿಐ ಕುಣಿಕೆ ಬಿಗಿ; ಮಾಜಿ ಗೃಹ, ವಿತ್ತ ಸಚಿವ, ಚಿದಂಬರಂ 'ಮನೆಯಿಂದ ಕಾಣೆ'!

Srinivas Rao BV

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಗೃಹ ಸಚಿವ, ವಿತ್ತ ಸಚಿವ ಪಿ.ಚಿದಂಬರಂ ನಾಪತ್ತೆಯಾಗಿದ್ದಾರೆ. 

ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆಯೇ ಇಡಿ (ಜಾರಿ ನಿರ್ದೇಶನಾಲಯ) ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ಬಂದಿದ್ದರು. ಆದರೆ ಚಿದಂಬರಂ ಅಲ್ಲಿ ಇರಲಿಲ್ಲ. 6:30 ಕ್ಕೆ ಮನೆಗೆ ಬಂದ ಅಧಿಕಾರಿಗಳು 10 ನಿಮಿಷಗಳ ನಂತರ ಅಲ್ಲಿಂದ ವಾಪಸ್ ತೆರಳಿದ್ದಾರೆ. ಸಿಬಿಐ ಅಧಿಕಾರಿಗಳು ಬಂದು ಹೋದ ಬೆನ್ನಲ್ಲೇ 7:30 ರ ಸುಮಾರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಸಹ ಚಿದಂಬರಂ ಮನೆಗೆ ಬಂದಿದ್ದಾರೆ. 

ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಚಿದಂಬರಂ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.

ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆಯೇ ಚಿದಂಬರಂ ಬಂಧನದಿಂದ ರಕ್ಷಣೆ ಪಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 

SCROLL FOR NEXT