ದೇಶ

ಐಎನ್ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಪ್ರತ್ಯಕ್ಷ, ಮಾಜಿ ಸಚಿವರ ಮನೆ ಪ್ರವೇಶಿಸಿದ ಸಿಬಿಐ, ಇಡಿ ಅಧಿಕಾರಿಗಳು

Srinivas Rao BV

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ, ಇ.ಡಿಯಿಂದ ಕಣ್ತಪ್ಪಿಸಿ ನಾಪತ್ತೆಯಾಗಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬೆನ್ನಲ್ಲೆ ಸಿಬಿಐ, ಇಡಿ ತಂಡ ಮಾಜಿ ಕೇಂದ್ರ ಸಚಿವರ ಬಂಧನಕ್ಕೆ ಸಿದ್ಧತೆ ನಡೆಸಿದೆ. 

ಇತ್ತೀಚಿನ ವರದಿಯ ಪ್ರಕಾರ ಚಿದಂಬರಂ ಅವರನ್ನು ಬಂಧಿಸಲು ಸಿಬಿಐ ಹಾಗೂ ಇ.ಡಿ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಚಿದಂಬರಂ ಅವರ ಮನೆಯೊಳಗೆ ಹಿಂಬಾಗಿಲ ಮೂಲಕ ಪ್ರವೇಶಿಸಿದ್ದಾರೆ. 

ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಚಿದಂಬರಂ, ತಮ್ಮ ವಿರುದ್ಧ ಕೇಳಿಬಂದಿದ್ದ ಕಾನೂನಿನಿಂದ ಕಣ್ತಪ್ಪಿಸಿಕೊಂಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ. "ನಾನು ಕಾನೂನಿನಿಂದ ತಲೆಮರೆಸಿಕೊಂಡಿರಲಿಲ್ಲ. ಆದರೆ ಕಾನೂನಿನಿಂದ ರಕ್ಷಣೆ ಪಡೆಯಲು ಮುಂದಾಗಿದ್ದೆ ಎಂದು ಹೇಳಿದ್ದರು. ಚಿದಂಬರಂ ಗೆ ಬಂಧನದಿಂದ ರಕ್ಷಣೆ ನೀಡುವುದಕ್ಕೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ನ ಎನ್ ವಿ ರಮಣ ನೇತೃತ್ವದ ಪೀಠ, ಅರ್ಜಿಯ ತುರ್ತು ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿತ್ತು. 

SCROLL FOR NEXT