ದೇಶ

ಹಲಾಲ್ ಮಾಂಸ ಮಾರಾಟ: ಮ್ಯಾಕ್ ಡೊನಾಲ್ಡ್ಸ್ಇಂಡಿಯಾ ವಿರುದ್ಧ ನೆಟ್ಟಿಗರ ಆಕ್ಷೇಪ! 

Srinivas Rao BV

ಜೊಮ್ಯಾಟೋ ನಂತರ ಆಹಾರದ ವಿಷಯವಾಗಿ ಮ್ಯಾಕ್ ಡೊನಾಲ್ಡ್ಸ್ ವಿರುದ್ಧ ಜನರ ಅಸಮಾಧಾನ ವ್ಯಕ್ತವಾಗತೊಡಗಿದೆ.  

ಟ್ವಿಟರ್ ಬಳಕೆದಾರರೊಬ್ಬರು ಮ್ಯಾಕ್ ಡೊನಾಲ್ಡ್ಸ್ ಇಂಡಿಯಾವನ್ನು "ನಿಮ್ಮ ರೆಸ್ಟೋರೆಂಟ್ ಗಳು ಹಲಾಲ್ ಪ್ರಮಾಣೀಕೃತವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಮ್ಯಾಕ್ ಡೊನಾಲ್ಡ್ಸ್ ಸಂಸ್ಥೆ ಹಲಾಲ್ ಮಾಂಸ ಮಾರಾಟ ಮಾಡುತ್ತೇವೆ ಎಂದು ಹೇಳಿದೆ. ಈ ಬೆನ್ನಲ್ಲೇ ನೆಟ್ಟಿಗರು ಮ್ಯಾಕ್ ಡೊನಾಲ್ಡ್ಸ್ಸ್ ವಿರುದ್ಧ ಸಿಡಿದೆದ್ದಿದ್ದು "ನಾವು ಹಿಂದೂಗಳು ಝಟ್ಕಾ ಮಾಂಸವನ್ನು ಮಾತ್ರ ತಿನ್ನುತ್ತೇವೆ ಎಂದು ಒಬ್ಬರು ಹೇಳಿದ್ದರೆ ಮತ್ತೊಬ್ಬರು ನನಗೆ ಹಲಾಲ್ ಮಾಂಸ ಬೇಕಾಗಿಲ್ಲ ನನಗೆ ಬೇರೆ ಯಾವ ಆಯ್ಕೆ ಇದೆ? ಅಥವಾ ನಾನು ಮ್ಯಾಕ್ ಡೊನಾಲ್ಡ್ಸ್ಸ್ ನಲ್ಲಿ ತಿನ್ನಬಾರದೇ? ಎಂದು ಕುಟುಕಿದ್ದಾರೆ. 

ಮ್ಯಾಕ್ ಡೊನಾಲ್ಡ್ಸ್ಸ್ ನೀಡಿದ ಉತ್ತರದಿಂದ ಆಕ್ರೋಶಗೊಂಡಿರುವ ಹಲವು ನೆಟ್ಟಿಗರು ಶೇ.80 ರಷ್ಟು ಮುಸ್ಲಿಮೇತರರಿರುವ ರಾಷ್ಟ್ರದಲ್ಲಿ ಹಲಾಲ್ ಮಾಂಸ ಪೂರೈಕೆ ಮಾಡುತ್ತಿರುವ ಮ್ಯಾಕ್ ಡೊನಾಲ್ಡ್ಸ್ ನ್ನು ತರಾಟಗೆ ತೆಗೆದುಕೊಂಡಿದ್ದು,  ನಿಮ್ಮ ಪ್ರತಿಕ್ರಿಯೆ ಪ್ರಕಾರ ಭಾರತದಲ್ಲಿ ನಿಮ್ಮ ಉತ್ಪನ್ನಗಳು ಮುಸ್ಲಿಮೇತರರಿಗೆ ಸೂಕ್ತವಲ್ಲ ಎಂದು ಭಾವಿಸುತ್ತೇನೆ, ಈ ಬಗ್ಗೆ ನನಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ಘಟನೆ ನಡೆಯುವುದಕ್ಕೂ ಮುನ್ನ ಜೊಮ್ಯಾಟೋ ಮುಸ್ಲಿಂ ಡೆಲಿವರಿ ಏಜೆಂಟ್ ವಿಷಯವಾಗಿ ಸುದ್ದಿಯಾಗಿತ್ತು. 

SCROLL FOR NEXT