ದೇಶ

ರೈಲ್ವೆ ಟಿಕೆಟ್ ಬುಕ್ಕಿಂಗ್ ಐಆರ್ ಸಿಟಿಸಿ ಜೊತೆ ವಿಲೀನ

Sumana Upadhyaya

ಚೆನ್ನೈ: ಭಾರತೀಯ ರೈಲ್ವೆಯ ಟಿಕೆಟ್ ಮತ್ತು ಕ್ಯಾಟರಿಂಗ್ ವಿಭಾಗವಾದ ಐಆರ್ ಸಿಟಿಸಿಗೆ ಟಿಕೆಟ್ ಕಾಯ್ದಿರಿಸುವ ಸಂಪೂರ್ಣ ಹತೋಟಿಯನ್ನು ನೀಡಲಾಗಿದೆ. ಕೆಲವು ಮಾರ್ಗಗಳಿಗೆ ಟಿಕೆಟ್ ದರವನ್ನು ನಿಗದಿಪಡಿಸುವ ಅಧಿಕಾರವನ್ನು ಐಆರ್ ಸಿಟಿಸಿಗೆ ನೀಡಿದ ನಂತರ ಈ ಕ್ರಮಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಇಲ್ಲಿಯವರೆಗೆ ಟಿಕೆಟ್ ದರ ನಿಗದಿಪಡಿಸುವ ಅಧಿಕಾರ ರೈಲ್ವೆ ಮಂಡಳಿಗೆ ಮಾತ್ರ ಇತ್ತು.


ರೈಲ್ವೆ ಇಲಾಖೆಯ ಅಂಗಸಂಸ್ಥೆಯಾದ ಐಆರ್ ಸಿಟಿಸಿ ಇಲ್ಲಿಯವರೆಗೆ ಪ್ರಯಾಣಿಕರಿಗೆ ಇ-ಟೆಕೆಟ್ ಬುಕ್ಕಿಂಗ್ ಮಾಡುವ ಮತ್ತು ಕ್ಯಾಟರಿಂಗ್ ಸೇವೆಯ ವ್ಯವಸ್ಥೆಯನ್ನು ಮಾತ್ರ ಹೊಂದಿತ್ತು. ಕಳೆದ ಮಂಗಳವಾರ ರೈಲ್ವೆ ಮಂಡಳಿ ಆದೇಶವೊಂದನ್ನು ಹೊರಡಿಸಿ ರೈಲ್ವೆಯ ಐಟಿ ಭಾಗವಾದ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರದಿಂದ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ತಂಡವನ್ನು ಪ್ರತ್ಯೇಕಿಸಬೇಕೆಂದು ಆದೇಶ ನೀಡಿ ಅದನ್ನು ಐಆರ್ ಸಿಟಿಸಿಗೆ ವರದಿ ಸಲ್ಲಿಸುವಂತೆ ಹೇಳಿದೆ.


ಇಡೀ ಪ್ರಯಾಣಿಕರ ಮೀಸಲಾತಿ ತಂಡ ಐಆರ್ ಸಿಟಿಸಿಗೆ ತಕ್ಷಣದಿಂದಲೇ ವರದಿ ಒಪ್ಪಿಸಬೇಕು ಎಂದು ರೈಲ್ವೆ ಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಯಾಣಿಕರ ಬೇಡಿಕೆಗಳಿಗೆ ಅನುಸಾರವಾಗಿ ಹೊಸ ಟಿಕೆಟ್ ಸಾಫ್ಟ್ ವೇರ್ ಗೆ ಬದಲಾಗುವುದು ಮುಖ್ಯವಾಗಿತ್ತು ಎಂದು ಐಆರ್ ಸಿಟಿಸಿ ತಿಳಿಸಿದೆ.

SCROLL FOR NEXT