ಮಾವೋವಾದಿಗಳ ಎನ್ಕೌಂಟರ್ 
ದೇಶ

ಛತ್ತೀಸ್ ಗಢ: ಭದ್ರತಾ ಪಡೆಗಳಿಂದ ಎನ್ಕೌಂಟರ್, ಐದು ಮಾವೋವಾದಿಗಳ ಹತ್ಯೆ, ಇಬ್ಬರು ಸೈನಿಕರಿಗೆ ಗಾಯ

ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ಮತ್ತೆ ಎನ್ ಕೌಂಟರ್ ನಡೆದಿದ್ದು, ಘಟನೆಯಲ್ಲಿ ಐವರು ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ತೀವ್ರ ಗುಂಡಿನ ಚಕಮಕಿ

ರಾಯ್ ಪುರ: ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ಮತ್ತೆ ಎನ್ ಕೌಂಟರ್ ನಡೆದಿದ್ದು, ಘಟನೆಯಲ್ಲಿ ಐವರು ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ನಾರಾಯಣ ಪುರ ಜಿಲ್ಲೆಯ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿರುವ ಕುರಿತು ಮಾಹಿತಿ ಪಡೆದ ಭದ್ರತಾ ಪಡೆಗಳು ಕೂಡಲೇ ಅಲ್ಲಿಗೆ ದೌಡಾಯಿಸಿದ್ದು, ಸೈನಿಕರ ಆಗಮನಗ ವಿಚಾರ ತಿಳಿಯುತ್ತಲೇ ಮಾವೋವಾದಿಗಳು ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ಸೈನಿಕರೂ ಕೂಡ ಪ್ರತಿದಾಳಿ ನಡೆಸಿದ್ದು, ಸೈನಿಕರ ಗುಂಡೇಟಿಗೆ ಐವರು ಮಾವೋವಾದಿಗಳು ಹತರಾಗಿದ್ದಾರೆ.

ಇನ್ನು ಘಟನೆಯಲ್ಲಿ ಇಬ್ಬರು ಸೈನಿಕರಿಗೂ ಕೂಡ ಗಾಯವಾಗಿದ್ದು, ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಪ್ರದೇಶದಲ್ಲಿ ಗುಂಡಿನ ಚಕಮಕಿ ಚಾಲ್ತಿಯಲ್ಲಿದ್ದು, ಹೆಚ್ಚುವರಿ ಸೈನಿಕರನ್ನು ರವಾನಿಸಲಾಗಿದೆ ಎಂದು ಹೇಳಲಾಗಿದೆ. 

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ವಿತರಣೆ, ಪ್ರತಿಭಟನೆ ವಾಪಸ್

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

ಬೆಂಗಳೂರು: ಮನೆಯಲ್ಲೇ ತಂದೆ-4 ವರ್ಷದ ಮಗ ನಿಗೂಢ ಸಾವು; ಬೆಡ್​ರೂಮ್​​ನಲ್ಲಿ ಮಲಗಿದ್ದ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು!