ಸಂಗ್ರಹ ಚಿತ್ರ 
ದೇಶ

ವೇಶ್ಯಾವಾಟಿಕೆಗೆ ತಾಯಿಯಿಂದ ಬಲವಂತ, ತಂಗಿಯನ್ನೇ ರೇಪ್ ಮಾಡಿದ ಅಣ್ಣ!

ದುಡ್ಡಿಗಾಗಿ ತಾಯಿಯೇ ಮಗಳನ್ನು 60 ವರ್ಷದ ಮುದುಕನ ಜೊತೆ ಪಲ್ಲಂಗ ಏರುವಂತೆ ಬಲವಂತ ಮಾಡಿದ್ದು ಇದರಿಂದ ನೊಂದ ಯುವತಿ ತನ್ನ ಕಷ್ಟವನ್ನು ಅಣ್ಣ ಬಳಿ ಹೇಳಿಕೊಳ್ಳಲು ಬಂದರೆ ಆತನೇ ಆಕೆಯನ್ನು ರೇಪ್ ಮಾಡಿ ಹೆದರಿಸಿರುವ ಹೀನ ಕೃತ್ಯ ನಡೆದಿದೆ. 

ಮುಂಬೈ: ದುಡ್ಡಿಗಾಗಿ ತಾಯಿಯೇ ಮಗಳನ್ನು 60 ವರ್ಷದ ಮುದುಕನ ಜೊತೆ ಪಲ್ಲಂಗ ಏರುವಂತೆ ಬಲವಂತ ಮಾಡಿದ್ದು ಇದರಿಂದ ನೊಂದ ಯುವತಿ ತನ್ನ ಕಷ್ಟವನ್ನು ಅಣ್ಣ ಬಳಿ ಹೇಳಿಕೊಳ್ಳಲು ಬಂದರೆ ಆತನೇ ಆಕೆಯನ್ನು ರೇಪ್ ಮಾಡಿ ಹೆದರಿಸಿರುವ ಹೀನ ಕೃತ್ಯ ನಡೆದಿದೆ. 

ಮುಂಬೈನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆಯ ತಾಯಿ, ಆಕೆಯ ಅಣ್ಣ, ಗಂಡ ಹಾಗೂ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಬಲವಂತ ಮಾಡಿ ತಾಯಿಯೇ ಮಗಳಿಗೆ 2018ರ ಏಪ್ರಿಲ್ ನಲ್ಲಿ ಯುವಕನೋರ್ವನ ಜೊತೆ ಮದುವೆ ಮಾಡಿಸಿರುತ್ತಾಳೆ. ಇನ್ನು ಮದುವೆಯಾದ ಗಂಡ ಸಹ ಮತ್ತೊಬ್ಬರ ಜೊತೆ ಮಲಗುವಂತೆ ಬಲವಂತ ಮಾಡುತ್ತಾನೆ. ಇದರಿಂದ ಬೇಸತ್ತ ಸಂತ್ರಸ್ತೆ ತಾಯಿಯ ಮನೆಗೆ ಬರುತ್ತಾಳೆ. 

ಕೆಲ ತಿಂಗಳ ಬಳಿಕ ತಾಯಿಯೇ ದುಡ್ಡಿಗಾಗಿ ಮಗಳನ್ನು 60 ವರ್ಷದ ಮುದುಕನ ಜೊತೆ ಮಲಗುವಂತೆ ಬಲವಂತ ಮಾಡುತ್ತಾಳೆ. ಹೀಗಾಗಿ ತನ್ನ ಗೋಳನ್ನು ಅಣ್ಣನ ಬಳಿ ಹೇಳಿಕೊಳ್ಳಲು ಬಂದಾಗ ಆತನ ಸಹ ಆಕೆಯ ಮೇಲೆ ರೇಪ್ ಮಾಡಿ ಯಾರಿಗಾದರೂ ಹೇಳಿದರೆ ಸಾಯಿಸುವ ಬೆದರಿಕೆ ಹಾಕಿದ್ದಾನೆ. 

ಈ ಎಲ್ಲ ಬೆಳವಣಿಗೆಯಿಂದ ನೊಂದ ಸಂತ್ರಸ್ತ ಮಹಿಳೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು 60 ವರ್ಷದ ಮುದುಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು