ಮಾಜಿ ಹಣಕಾಸು ಸಚಿವ ಜೇಟ್ಲಿನಿವಾಸಕ್ಕೆ ಪಿಎಂ ಭೇಟಿ 
ದೇಶ

ಮಾಜಿ ಹಣಕಾಸು ಸಚಿವ ಜೇಟ್ಲಿ ನಿವಾಸಕ್ಕೆ ಪಿಎಂ ಭೇಟಿ, ದಿವಂಗತ ಬಿಜೆಪಿ ಮುಖಂಡನಿಗೆ ಗೌರವ ಸಲ್ಲಿಸಿದ ಮೋದಿ

ಜಿ7 ಶೃಂಗಸಭೆ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರಅರುಣ್ ಜೇಟ್ಲಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ದಿವಂಗತ ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡರಿಗೆ ಗೌರವ ನಮನ ಸಲ್ಲಿಸಿದ್ದಾರೆ. 

ನವದೆಹಲಿ: ಜಿ7 ಶೃಂಗಸಭೆ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರಅರುಣ್ ಜೇಟ್ಲಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ಅಲ್ಲಿ ದಿವಂಗತ ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಮೋದಿ ಕಳೆದ ದಿನಗಳಲ್ಲಿ  ಫ್ರಾನ್ಸ್-ಯುಎಇ-ಬಹ್ರೇನ್‌ಗೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಇದ್ದ ಕಾರಣ ಜೇಟ್ಲಿಯವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಿರಲಿಲ್ಲ. ಆದಾಗ್ಯೂ, ಅವರ ನಿಧನದ ಸುದ್ದಿಯನ್ನು ತಿಳಿಯುತ್ತಲೇ ಅವರು ಜೇಟ್ಲಿಯ ಕುಟುಂಬದೊಂದಿಗೆ ಮಾತನಾಡಿದ್ದರು ಮತ್ತು ಸಂತಾಪ ವ್ಯಕ್ತಪಡಿಸಿದ್ದರು.

ಆಗಸ್ಟ್ 24 ರಂದು ಏಮ್ಸ್ ಆಸ್ಪತ್ರೆಯಲ್ಲಿ ಜೇಟ್ಲಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.ನಾಲ್ಕು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದ ಅವರು 2000 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾದರು. ಜೂನ್ 2009 ರಿಂದ 2014 ರವರೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರುಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಜೇಟ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ, ರಕ್ಷಣಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಗಳನ್ನು ಸಹ ಹೊಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರದಲ್ಲಿ NI-MO ಮೋಡಿ: NDA ಪ್ರಚಂಡ ಗೆಲುವು; ಅತಿದೊಡ್ಡ ಪಕ್ಷವಾಗಿ BJP; ಕುಸಿದ ತೇಜಸ್ವಿ ಯಾದವ್; Congress ಸ್ಥಿತಿ ಹೀನಾಯ!

ಬಿಹಾರ ಚುನಾವಣೆ 2025: ಸೋತು ಗೆದ್ದ ತೇಜಸ್ವಿ ಯಾದವ್; ಕುಟುಂಬದ ಭದ್ರಕೋಟೆ ರಾಘೋಪುರ್ ಉಳಿಸಿಕೊಳ್ಳಲು ಸುಸ್ತೋ ಸುಸ್ತು!

Bihar Elections 2025: NDA ಗೆಲುವಿನ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ Modi ಬಗ್ಗೆ Nitish ಅಚ್ಚರಿಯ ಹೇಳಿಕೆ!

Bihar Election Results: ಅಲಿನಗರ ಕ್ಷೇತ್ರದಲ್ಲಿ BJP ಅಭ್ಯರ್ಥಿ ಮೈಥಿಲಿ ಠಾಕೂರ್ ಇತಿಹಾಸ ಸೃಷ್ಟಿ; ಅತಿ ಕಿರಿಯ ವಯಸ್ಸಿನ ಶಾಸಕಿ!

ಬಿಹಾರದಲ್ಲಿ Congress ಹೀನಾಯ ಹಿನ್ನಡೆ: 'ಸೋಲಿನ ಸರದಾರ' ರಾಹುಲ್ ಗಾಂಧಿಗೆ ಇದು '95 ನೇ ಸೋಲು'!

SCROLL FOR NEXT