ಪ್ರವಾಹ ಸ್ಥಿತಿ ಅವಲೋಕನದ ವೇಳೆ ರಾಹುಲ್ ಗಾಂಧಿಯನ್ನು ಚುಂಬಿಸಿದ ಯುವಕ! 
ದೇಶ

ವೀಡಿಯೋ: ಪ್ರವಾಹ ಸ್ಥಿತಿ ಅವಲೋಕನದ ವೇಳೆ ರಾಹುಲ್ ಗಾಂಧಿಯನ್ನು ಚುಂಬಿಸಿದ ಯುವಕ!

ಕೇರಳದ ವೈನಾಡ್ ನ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಕ್ಷೇತ್ರದ ಪ್ರವಾಸದಲ್ಲಿದ್ದ ವೇಳೆ ಯುವಕನೊಬ್ಬ ಅವರನ್ನು ಚುಂಬಿಸಿದ ವಿಚಿತ್ರ ಘಟನೆ ನಡೆದಿದೆ. 

ವೈನಾಡ್: ಕೇರಳದ ವೈನಾಡ್ ನ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಕ್ಷೇತ್ರದ ಪ್ರವಾಸದಲ್ಲಿದ್ದ ವೇಳೆ ಯುವಕನೊಬ್ಬ ಅವರನ್ನು ಚುಂಬಿಸಿದ ವಿಚಿತ್ರ ಘಟನೆ ನಡೆದಿದೆ.

ಎಸ್ ಯುವಿ ನಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ನಾಯಕನಿಗೆ ಶುಭಾಶಯ ಕೋರುವ ವ್ಯಕ್ತಿಯು ಮೊದಲು ಅವನ ಕೈಯನ್ನು ಕುಲುಕಿದ ನಂತರ ಅವರನ್ನು ತಬ್ಬಿ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಬೂದು ಬಣ್ಣದ ಟೀ ಶರ್ಟ್‌ ಧರಿಸಿದ್ದ ರಾಹುಲ್‌, ತಮ್ಮ ಕಾರಿನಲ್ಲಿ ಕುಳಿತು ಕಿಟಕಿಯಿಂದ ಜನರತ್ತ ಕೈಬೀಸುವಾಗ ಈ ಘಟನೆ ನಡೆದಿದೆ. ವಿಶೇಷವೆಂದರೆ ರಾಹುಲ್ ಅಚ್ಚರಿಗೊಳಗಾಗಿದ್ದರೂ ಸಹ ಕಿಸ್ ಮಾಡಿದ ವ್ಯಕ್ತಿಯನ್ನು ದೂರ ತಳ್ಳಲಿಲ್ಲ.

ಕಾಂಗ್ರೆಸ್ ಸಂಸದ ಇಂದು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡಿ ವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.

ರಾಹುಲ್ ಗಾಂಧಿಗೆ ವ್ಯಕ್ತಿಯೊಬ್ಬ ಕಿಸ್ ಮಾಡುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ನೀಲಿ ಬಣ್ಣದ ಶರ್ಟ್‌ ಧರಿಸಿರುವ ವ್ಯಕ್ತಿ ಮೊದಲು ಅವರ ಕೈಕುಲುಕಿ ಬಳಿಕ ತಬ್ಬಿ ಕೆನ್ನೆಗೆ ಮುತ್ತಿಕ್ಕಿದ್ದಾನೆ.

ಇದಕ್ಕೆ ಹಿಂದೆ ಫೆ. 14ರ  ಪ್ರೇಮಿಗಳ ದಿನದಂದು ಗುಜರಾತಿನಲ್ಲಿ ಚುನಾವಣಾ ರ್ಯಾಲಿಯಲ್ಲಿದ್ದ ರಾಹುಲ್ ಗೆ ಮಹಿಳೆಯೊಬ್ಬರು ಕಿಸ್ ಮಾಡಿದ್ದರು. 2014ರಲ್ಲಿ ರಾಜಕೀಯ ಸಮಾವೇಶದ ಬಳಿಕ ಪಶ್ಚಿಮ ಬಂಗಾಳದ ಸ್ವೀಟ್ ಅಂಗಡಿಗೆ ಆಗಮಿಸಿದ ರಾಹುಲ್ ಗೆ ವ್ಯಕ್ತಿಯೊಬ್ಬ ಕಿಸ್ ಮಾಡಿದ್ದನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆವರೆಗೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಅಬ್ರಹಾಂ ಒಪ್ಪಂದಕ್ಕೆ 'NO' ಎಂದ ಪಾಕಿಸ್ತಾನ, ಟ್ರಂಪ್ ರಾಜತಾಂತ್ರಿಕ ಯತ್ನಕ್ಕೆ ಹಿನ್ನೆಡೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

SCROLL FOR NEXT