ದೇಶ

ಕಾಶ್ಮೀರಕ್ಕೆ ಹೋಗಿ ಬಂದ ಮೇಲೆ ಸುಪ್ರೀಂ ಕೋರ್ಟ್ ಗೆ ವರದಿ ನೀಡುವೆ: ಸೀತಾರಾಮ್ ಯೆಚೂರಿ 

Sumana Upadhyaya

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನಾಳೆ ಅಲ್ಲಿಗೆ ಭೇಟಿ ನೀಡಲಿದ್ದಾರೆ.


ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿನ ವಸ್ತುಸ್ಥಿತಿ ತಿಳಿದು ಹಿಂತಿರುಗಿದ ನಂತರ ಕೋರ್ಟ್ ಗೆ ಮಾಹಿತಿ ನೀಡುತ್ತೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.


ಸಂವಿಧಾನ ವಿಧಿ 370 ರದ್ದುಪಡಿಸಿರುವ ಹಿನ್ನಲೆಯಲ್ಲಿ ಭದ್ರತೆಯ ಕ್ರಮವಾಗಿ ಗೃಹ ಬಂಧನದಲ್ಲಿರುವ ಸಿಪಿಎಂ ನಾಯಕ ಮಾಜಿ ಶಾಸಕ ಮೊಹಮ್ಮದ್ ಯೂಸಫ್ ಟರಿಗಮಿಯನ್ನು ಭೇಟಿ ಮಾಡಲು ಸೀತಾರಾಮ್ ಯೆಚೂರಿಗೆ ಅವಕಾಶ ನೀಡಲಾಗಿದೆ. ಆದರೆ ಭೇಟಿ ವೇಳೆ ಇತರ ಯಾವುದೇ ರಾಜಕೀಯ ವಿಷಯಗಳನ್ನು ಚರ್ಚಿಸದಂತೆ ಮತ್ತು ಬೇರೆ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕೋರ್ಟ್ ಯೆಚೂರಿಗೆ ನಿರ್ಬಂಧ ವಿಧಿಸಿದರೆ. ಒಂದು ವೇಳೆ ಅದನ್ನು ಉಲ್ಲಂಘಿಸಿದರೆ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ತಿಳಿಸುವಂತೆ ಸೂಚಿಸಲಾಗಿದೆ. 


ಜಮ್ಮುವಿನಿಂದ ಮರಳಿದ ನಂತರ ಸೀತಾರಾಮ್ ಯೆಚೂರಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ಟು ಸಲ್ಲಿಸುವ ಸಾಧ್ಯತೆಯಿದೆ. 

SCROLL FOR NEXT