ಕಾಶ್ಮೀರ ಯಾವಾಗ ನಿಮ್ಮದಾಗಿತ್ತು: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಪ್ರಶ್ನೆ
ಕಾಶ್ಮೀರದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ, ಮಾತನಾಡುವ, ಬೊಬ್ಬಿಡುವ ಪಾಕಿಸ್ತಾನಕ್ಕೆ ನಾನು ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ, ಕಾಶ್ಮೀರ ಯಾವಾಗ ನಿಮ್ಮದಾಗಿತ್ತು ಎಂದು ಕೇಳುತ್ತೇನೆ ಎಂದಿದ್ದಾರೆ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್.
ಲಡಾಕ್: ಕಾಶ್ಮೀರದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ, ಮಾತನಾಡುವ, ಬೊಬ್ಬಿಡುವ ಪಾಕಿಸ್ತಾನಕ್ಕೆ ನಾನು ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ, ಕಾಶ್ಮೀರ ಯಾವಾಗ ನಿಮ್ಮದಾಗಿತ್ತು ಎಂದು ಕೇಳುತ್ತೇನೆ ಎಂದಿದ್ದಾರೆ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್.
ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ವಿಭಜನೆ ಮಾಡಿ ಮತ್ತು ಲಡಾಕ್ ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ರಕ್ಷಣಾ ಸಚಿವರು ಮೊದಲ ಬಾರಿಗೆ ಲಡಾಕ್ ಗೆ ಭೇಟಿ ನೀಡುತ್ತಿದ್ದಾರೆ. ಅವರು ಇಂದು ಅಲ್ಲಿ 26ನೇ ಕಿಸಾನ್ -ಜವಾನ್ ವಿಜ್ಞಾನ ಮೇಳೆವನ್ನುದ್ದೇಶಿಸಿ ಮಾತನಾಡಿದರು.
ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮಾತನಾಡುವ ಯಾವುದೇ ಅಸ್ಥಿತ್ವ ಅಥವಾ ಅಧಿಕಾರವಿಲ್ಲ. ಕಾಶ್ಮೀರ ಹೇಗೆ ಪಾಕಿಸ್ತಾನದ್ದಾಗಿತ್ತು,, ಕಾಶ್ಮೀರ ವಿಚಾರದಲ್ಲಿ ಅವರೇಕೆ ಹಸ್ತಕ್ಷೇಪ ಮಾಡಬೇಕು, ಪಾಕಿಸ್ತಾನ ರಚನೆಯಾದ ರಾಷ್ಟ್ರ, ಅದರ ಇರುವಿಕೆಯನ್ನು ನಾನು ಗೌರವಿಸುತ್ತೇನೆ ಎಂದರು.
ಇಂದು ಅವರು ಲಡಾಕ್ ನಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.