ಚಂದ್ರಯಾನ್ -2 ಇಳಿಕೆ ವೀಕ್ಷಣೆ: ಪಿಎಂ ಜೊತೆ ಲಕ್ನೋ ಹುಡುಗಿ ಭಾಗಿ 
ದೇಶ

ಚಂದ್ರಯಾನ್ -2 ಇಳಿಕೆ ವೀಕ್ಷಣೆ: ಪಿಎಂ ಜೊತೆ ಲಕ್ನೋ ಹುಡುಗಿ ಭಾಗಿ!

ದೆಹಲಿ ಪಬ್ಲಿಕ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ರಾಶಿ ವರ್ಮಾ ಅವರು ಚಂದ್ರನ ಅಂಗಳದಲ್ಲಿ  ಚಂದ್ರಯಾನ  - 2 ನೌಕೆ ಇಳಿಯುವುದನ್ನು ವೀಕ್ಷಿಸಲು ದೇಶಾದ್ಯಂತ 60 ಮಕ್ಕಳಲ್ಲಿ ಆಯ್ಕೆಯಾಗಿರುವುದು ಉತ್ತರ ಪ್ರದೇಶವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. 

ಲಕ್ನೋ:  ದೆಹಲಿ ಪಬ್ಲಿಕ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ರಾಶಿ ವರ್ಮಾ ಅವರು ಚಂದ್ರನ ಅಂಗಳದಲ್ಲಿ  ಚಂದ್ರಯಾನ  - 2 ನೌಕೆ  ಇಳಿಯುವುದನ್ನು ವೀಕ್ಷಿಸಲು ದೇಶಾದ್ಯಂತದ 60 ಮಕ್ಕಳಲ್ಲಿ ಆಯ್ಕೆಯಾಗಿರುವುದು ಉತ್ತರ ಪ್ರದೇಶವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. 

ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ  ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಕೆ ಭಾಗಿಯಾಗಲಿದ್ದಾರೆ.  

ಸೆಪ್ಟೆಂಬರ್ 7 ರಂದು ಬೆಳಿಗ್ಗೆ 01:55 ಕ್ಕೆ ಪಿಎಂ ನರೇಂದ್ರ ಮೋದಿಯವರೊಂದಿಗೆ ಚಂದ್ರಯಾನ ನೌಕೆ ದಕ್ಷಿಣ ದೃವದಲ್ಲಿ ಇಳಿಯುವುದನ್ನು ವೀಕ್ಷಿಸಲು ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯದಿಂದ ಆಯ್ಕೆ ಮಾಡಿದ್ದರೂ ಆಗಸ್ಟ್ 10 ರಿಂದ 25 ರವರೆಗೆ ನಡೆಸಿದ ಆನ್‌ಲೈನ್ ವಿಜ್ಞಾನ ರಸಪ್ರಶ್ನೆಯ ಹಲವು ಸುತ್ತುಗಳ ನಂತರ  ರಾಶಿ ವರ್ಮಾ ಎಂಬ 8 ನೇ ತರಗತಿ ವಿದ್ಯಾರ್ಥಿ ಅಂತಿಮವಾಗಿ ಆಯ್ಕೆಯಾಗಿದ್ದಾರೆ.  

ಈ ಕುರಿತು ಮಾಧ್ಯಮ ಜೊತೆ  ಮಾತನಾಡಿದ ರಾಶಿ, ಭವಿಷ್ಯದಲ್ಲಿ ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದೇನೆ ನನಗೆ ಅವಕಾಶ ಸಿಕ್ಕರೆ  ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ . 

ರಾಶಿ ಅವರಲ್ಲದೆ, ಒಡಿಶಾ, ಜಾರ್ಖಂಡ್ ಮತ್ತು ಮೇಘಾಲಯದ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಈ ಅಪರೂಪದ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್