ಸರದಿ ಸಾಲಿನಲ್ಲಿ ನಿಂತು ವರದಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುತ್ತಿರುವ ಜನರು 
ದೇಶ

ಅಸ್ಸಾಂ ಎನ್ ಆರ್ ಸಿ ಅಂತಿಮ ವರದಿ ಪ್ರಕಟ; 19 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ನಾಗರಿಕರೇ ಅಲ್ಲ!

ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ. 

ಗುವಾಹಟಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ ಆರ್ ಸಿ) ಅಂತಿಮ ವರದಿ ಹೊರಬಿದ್ದಿದ್ದು ಸುಮಾರು 19 ಲಕ್ಷಕ್ಕೂ ಅಧಿಕ ಮಂದಿಯ ಹೆಸರು ಈ ದಾಖಲಾತಿ ವರದಿಯಲ್ಲಿಲ್ಲ. 

ಎನ್ ಆರ್ ಸಿ ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿಯ 30 ಲಕ್ಷದ 27 ಸಾವಿರದ 661 ಮಂದಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನ ವಿಧಿ 4(3)ರಡಿಯಲ್ಲಿ ಜನರು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಅಂತಿಮ ಎನ್ ಆರ್ ಸಿ ವರದಿಯಲ್ಲಿ 3 ಕೋಟಿಯ 11 ಲಕ್ಷದ 21 ಸಾವಿರದ 4 ಮಂದಿ ಭಾರತೀಯ ನಾಗರಿಕತೆಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ 19 ಲಕ್ಷದ 6 ಸಾವಿರದ 657 ಮಂದಿ ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂಬ ಅಂಕಿಅಂಶದ ಮಾಹಿತಿ ಸಿಕ್ಕಿದೆ.


ಕಳೆದ ವರ್ಷ ಎನ್ ಆರ್ ಸಿ ಪ್ರಕಟಿಸಿದ್ದ ಕರಡು ವರದಿ ಮತ್ತು ಈ ವರ್ಷಾರಂಭದಲ್ಲಿ ಪ್ರಕಟಿಸಿದ್ದ ಮತ್ತೊಂದು ಕರಡು ವರದಿಯಲ್ಲಿ 41 ಲಕ್ಷದ 9 ಸಾವಿರ ಮಂದಿಯನ್ನು ನಾಗರಿಕ ದಾಖಲಾತಿ ಪಟ್ಟಿಯಿಂದ ಹೊರಗಿಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT