ದೇಶ

ಅಯೋಧ್ಯೆ ವಿವಾದ: ಮುಸ್ಲಿಂ ಪರ ವಕೀಲ ರಾಜೀವ್ ಧವನ್ ವಜಾ

Manjula VN

ನವದೆಹಲಿ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಪರ ವಕೀಲರಾದ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದ್ದು, ಇನ್ನು ಮುಂದೆ ರಾಜೀವ್ ಧವನ್ ಅವರು ಮುಸ್ಲಿಮರ ಪರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಾದ ಮಾಡುವಂತಿಲ್ಲ. 

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಿಂದ ಜಮಾಯತ್ ಪರ ವಾದ ಮಂಡಿಸುತ್ತಿದ್ದ ವಕೀಲ ಏಜಾಜ್ ಮಕ್ಬೂಲ್ ರಿಂದ ವವಾಗೊಂಡ ಬಗ್ಗೆ ತಿಳಿದುಬಂದಿದೆ. ಮೇಲ್ಮನವಿ ಸಲ್ಲಿಸುವ ಅಧಿಕಾರ ಈಗ ಇಲ್ಲ ಎಂದು ಫೇಸ್'ಬುಕ್ ನಲ್ಲಿ ರಾಜೀವ್ ಧವನ್ ಅವರು ಬರೆದುಕೊಂಡಿದ್ದಾರೆ. 

ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನನ್ನನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ ಎಂಬ ಕಾರಣ ನೀಡಿದ್ದಾರೆ. ವಜಾಗೊಳಿಸುವ ವಕೀಲರನ್ನು ಬದಲಿರುವ ಅಧಿಕಾರ ಇರುತ್ತದೆ. ಇದನ್ನೇ ಎಒಆರ್ ಏಜಾಜ್ ಮಾಡಿದ್ದಾರೆ. ಆದರೆ,ನೀಡಿರುವ ಕಾರಣ ಸರಿಯಿಲ್ಲ ಹಾಗೂ ಸತ್ಯಕ್ಕೆ ದೂರವಾಗಿದೆ ಎಂದು ಧವನ್ ಹೇಳಿಕೊಂಡಿದ್ದಾರೆ.
 
ಅಯೋಧ್ಯೆ ವಿವಾದ ಸಂಬಂಧ ಅ.16ರಂದು ಸುಪ್ರೀಂಕೋರ್ಟ್ ನಲ್ಲಿ ನಡೆದ ಅಂತಿಮ ವಿಚಾರಣೆ ವೇಳೆ ರಾಮಜನ್ಮಭೂಮಿಯ ನಕ್ಷೆಯನ್ನು ರಾಜೀವ್ ಅವರು ಹರಿದುಹಾಕಿದ್ದರು. 

ಅಕ್ಟೋಬರ್ ತಿಂಗಳಿನಲ್ಲಿ ನಡೆದ ಅಯೋಧ್ಯೆ ವಿವಾದ ಸಂಬಂಧ ಸಿವಿಪ್ ಪ್ರಕರಣದಲ್ಲಿ ಪ್ರತಿದಿನದ ವಿಚಾರಣೆಯಲ್ಲಿ 40 ದಿನಗಳ ಪೈಕಿ ಎರಡು ವಾರಕ್ಕೂ ಹೆಚ್ಚು ಕಾಲ ಧವನ್ ಅವರು ಮುಸ್ಲಿಮರ ಪರ ವಾದ ಮಂಡಿಸಿದ್ದರು. 

SCROLL FOR NEXT