ದೇಶ

ಶ್ರೀರಾಮನೇ ಆದರೂ 100 ಪ್ರತಿಶತ ಅಪರಾಧ ಮುಕ್ತ ಸಮಾಜದ ಭರವಸೆ ನೀಡಲು ಸಾಧ್ಯವಿಲ್ಲ: ಯುಪಿ ಸಚಿವ

Raghavendra Adiga

ಲಖನೌ: ಅತ್ಯಂತ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಯಾವುದೇ ರಾಜ್ಯವನ್ನು  ಶೇಕಡಾ 100 ರಷ್ಟು ಅಪರಾಧ ಮುಕ್ತಗೊಳಿಸುವುದು ಅಸಾಧ್ಯ ಎನ್ನುವ ಮೂಲಕ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್  ಸರ್ಕಾರದ ಸಚಿವರೊಬ್ಬರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

ಜಾಮೀನಿನ ಮೇಲೆ ಹೊರಗಿದ್ದ ಅತ್ಯಾಚಾರಿಗಳು ಉನ್ನಾವೊ ಜಿಲ್ಲೆಯ ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂತ್ರಸ್ಥೆಗೆ ಬೆಂಕಿ ಹಚ್ಚಿದ ಭೀಕರ ಘಟನೆಯ ಬಳಿಕ ಯುಪಿ ಸಚಿವ ವ ರಣವೇಂದ್ರ ಪ್ರತಾಪ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

"ಭಗವಂತನಾದ ಶ್ರೀರಾಮ ಸಹ ಇಂದಿನ ಸಮಯದಲ್ಲಿ ಶೇಕಡಾ 100 ರಷ್ಟು ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ" ಎಂದು ಉನ್ನಾವೊ ಘಟನೆಗೆ ಪ್ರತಿಕ್ರಿಯಿಸುವಾಗ ಸಚಿವರು ಹೇಳಿದರು.

"ಒಂದು ಸಮಾಜದಲ್ಲಿ ಶೇಕಡಾ 100 ರಷ್ಟು ಅಪರಾಧಮುಕ್ತವಾಗಿ ಮಾಡಲು ಸಾಧ್ಯವಿಲ್ಲ. ಸ್ವತಃಅ ಶ್ರೀರಾಮ ಸಹ ಈ ಭರವಸೆ ನೀಡಲು ಬರುವುದಿಲ್ಲ. ಆದ್ದರಿಂದ ಶೇಕಡಾ 100 ರಷ್ಟು ಅಪರಾಧ ಮುಕ್ತ ಸಮಾಜ ಸೃಷ್ಟಿ ಸಾಧ್ಯವಿಲ್ಲ. ಹಾಗಿದ್ದರೂ ಅಪರಾಧ ನಡೆದರೆ, ಅಪರಾಧಿ ಜೈಲಿಗೆ ಇಳಿಯುತ್ತಾನೆ ಮತ್ತು ಅವನಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ "ಸಚಿವ ಸಿಂಗ್ ಹೇಳಿದ್ದಾರೆ.

ರಾಜ್ಯದಲ್ಲಿ ಸಂಘಟಿತ ಅಪರಾಧಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಚಿವರು ಹೇಳಿದ್ದಾರೆ. ಮೊದಲಿನಂತೆ ಅಪರಾಧಿಗಳಿಗೆ ರಾಜಕೀಯ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಅವರು ಹೇಳಿದರು "ಇಂದು ಉತ್ತರ ಪ್ರದೇಶದಜನತೆ ಯಾವುದೇ ಭಯವಿಲ್ಲದೆ ಸಂಪೂರ್ಣವಾಗಿ ಶಾಂತಿಯುತವಾಗಿದೆ"ಅವರು ಹೇಳಿದರು.

SCROLL FOR NEXT