ದೇಶ

ಪಿಎಸ್‍ಎಲ್‍ವಿ-ಸಿ 48 ಉಡಾವಣೆಗೆ ಕ್ಷಣಗಣನೆ: ತಿರುಪತಿಯಲ್ಲಿ ಇಸ್ರೋ ಅಧ್ಯಕ್ಷ ಸಿವನ್ ರಿಂದ ವಿಶೇಷ ಪೂಜೆ

Lingaraj Badiger

ತಿರುಮಲ: ಪಿಎಸ್‍ಎಲ್‍ವಿ-ಸಿ 48 ಉಡಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ಇಲ್ಲಿನ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಸಿವನ್ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ 628 ಕೆ.ಜಿ. ತೂಕದ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿ ಆರ್ ಐ ಮತ್ತು ಇತರ 9 ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪಿಎಸ್‍ಎಲ್‍ವಿ-ಸಿ 48 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿವನ್ ಅವರು, ಪಿಎಸ್‍ಎಲ್‍ವಿಯ 50ನೇ ಉಡಾವಣೆ ಮತ್ತು ಶ್ರೀಹರಿಕೋಟಾದಿಂದ 75ನೇ ಉಡಾವಣೆಯಾದ್ದರಿಂದ ಪಿಎಸ್‍ಎಲ್‍ವಿ-ಸಿ 48 ಉಡಾವಣೆ ಐತಿಹಾಸಿಕ ಸಾಧನೆಯಾಗಲಿದೆ ಎಂದು ಹೇಳಿದರು.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ(ಡಿ. 11)ರಂದು ಸಂಜೆ 3.25ಕ್ಕೆ ಉಪಗ್ರಹ ರಿಸ್ಯಾಟ್-2ಬಿ ಆರ್ ಐ ಅನ್ನು ಪಿಎಸ್‍ಎಲ್‍ವಿ- ಸಿ48 ರಾಕೆಟ್ ಮೂಲಕ ಉಡಾವಣೆಯಾಗಲಿದೆ.

SCROLL FOR NEXT