ಸಾಂಕೇತಿಕ ಚಿತ್ರ 
ದೇಶ

ಸೇಲಂನ ಈ ಕಳ್ಳನಿಗೆ ಕದಿಯುವುದು ಚಟವಂತೆ, ಕಳ್ಳತನ ಮಾಡದಿದ್ದರೆ ರಾತ್ರಿ ನಿದ್ದೆಯೇ ಬರುವುದಿಲ್ಲವಂತೆ!

ತಾನು ಕಳ್ಳತನ, ದರೋಡೆ ಚಟಕ್ಕೆ ಬಲಿಯಾಗಿದ್ದೇನೆ ಎಂದು ದರೋಡೆಕೋರನೊಬ್ಬ ಸೇಲಂ ನಗರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಸೇಲಂ: ತಾನು ಕಳ್ಳತನ, ದರೋಡೆ ಚಟಕ್ಕೆ ಬಲಿಯಾಗಿದ್ದೇನೆ ಎಂದು ದರೋಡೆಕೋರನೊಬ್ಬ ಸೇಲಂ ನಗರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆ ವೇಳೆ ಪೊಲೀಸರ ಮುಂದೆ ಆರೋಪಿ ಅಯ್ಯದೊರೈ ಅಲಿಯಾಸ್ ಸಪ್ಪಾಣಿ ಕಳ್ಳತನ ಮಾಡದಿದ್ದರೆ ತನಗೆ ರಾತ್ರಿ ಸರಿಯಾಗಿ ನಿದ್ದೆಯೇ ಬರುವುದಿಲ್ಲ ಎಂದು ಹೇಳಿದ್ದಾನೆ.


40 ದಿನಗಳ ಹಿಂದೆ ಈತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು, ಅಂದಿನಿಂದ ಇಲ್ಲಿಯವರೆಗೆ 27 ದರೋಡೆಗಳನ್ನು ಮಾಡಿದ್ದಾನೆ ಎಂದು ಸುರಮಂಗಲಂ ಪೊಲೀಸರು ಹೇಳುತ್ತಾರೆ.


ಈತನ ವಿರುದ್ಧ ಸುರಮಂಗಲಂ, ಪಲ್ಲಪಟ್ಟಿ, ಮೆಚಿರಿ,ಒಮಲೂರು ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ದರೋಡೆಕೋರರನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಟಿ ಸೆಂತಿಲ್ ಕುಮಾರ್ ತಿಳಿಸಿದ್ದಾರೆ.


ಅಯ್ಯದೊರೈ ಸೇಲಂನ ಒಮಲೂರಿನ ಪಾಗಲ್ಪಟ್ಟಿ ಬಳಿ ಚೆಲ್ಲಕುಟ್ಟೈಪಟ್ಟಿಯ ನಿವಾಸಿಯಾಗಿದ್ದು ಕಂಡಂಪಟ್ಟಿ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ತನಿಖೆ ವೇಳೆ ಕಳೆದ 2 ತಿಂಗಳಲ್ಲಿ 17ಕ್ಕೂ ಹೆಚ್ಚು ಕಳ್ಳತನ ಮಾಡಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.


ಈತ 1990ರ ದಶಕದಿಂದ ಕಳ್ಳತನ, ದರೋಡೆ ಮಾಡಲು ಆರಂಭಿಸಿದ್ದ. ಕಳೆದೆರಡು ದಶಕಗಳಲ್ಲಿ 30ಕ್ಕೂ ಅಧಿಕ ಕಳ್ಳತನ, ದರೋಡೆ ಕೇಸುಗಳು ಈತನ ವಿರುದ್ಧ ದಾಖಲಾಗಿವೆ. ಕೊಯಂಬತ್ತೂರಿನ ಕೇಂದ್ರ ಕಾರಾಗೃಹದಲ್ಲಿ ಈತನನ್ನು ಬಂಧಿಸಿ ಇಡಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಕಳ್ಳತನ ತನಗೆ ಅಭ್ಯಾಸವಾಗಿ ಹೋಗಿದ್ದು ಮನೆಗಳ ಬಾಗಿಲು ಒಡೆದು ಚಿನ್ನ-ಬೆಳ್ಳಿ ಕದಿಯುವುದು ಸಾಮಾನ್ಯವಾಗಿ ಹೋಗಿದೆಯಂತೆ. ಕಳ್ಳತನ ಮಾಡದಿದ್ದರೆ ನಿದ್ದೆಯೇ ಬರುವುದಿಲ್ಲ ಎನ್ನುತ್ತಾನೆ.

 
ಕಳ್ಳತನ ಮಾಡಲು ಉದ್ದೇಶಿಸುವ ಪ್ರದೇಶವನ್ನು ನೋಡಿಕೊಂಡು ಅಲ್ಲಿನ ಬೀದಿ ನಾಯಿಗಳಿಗೆ ತಿನ್ನಲು ಬಿಸ್ಕೆಟ್, ಮಾಂಸ ಹಾಕಿ ಅವು ಬೊಗಳದಂತೆ ಕಳ್ಳತನ ಮಾಡಲು ಹೋಗುವಾಗ ಹಿಂದಿನಿಂದ ಬರದಂತೆ ಮಾಡುತ್ತಾನೆ ಎಂದು ಪೊಲೀಸರು ಆತನ ಕಳ್ಳತನದ ಶೈಲಿಯನ್ನು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT