ದೇಶ

ರೇಪ್ ಇನ್ ಇಂಡಿಯಾ ಹೇಳಿಕೆ: ಚುನಾವಣಾ ಆಯೋಗಕ್ಕೆ ರಾಹುಲ್ ವಿರುದ್ಧ ಸ್ಮೃತಿ ದೂರು! 

Srinivas Rao BV

ಜಾರ್ಖಂಡ್: ರೇಪ್ ಇನ್ ಇಂಡಿಯಾ ಹೇಳಿಕೆ ನೀಡಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. 

ಚುನಾವಣಾ ಕಣವಾಗಿರುವ ಜಾರ್ಖಂಡ್ ನ ಸಮಾವೇಶದಲ್ಲಿ ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಕುರಿತು ಹೇಳಿಕೆ ನೀಡಿದ್ದರು.ಇದರ ವಿರುದ್ಧ ಸ್ಮೃತಿ ಇರಾನಿ ನೇತೃತ್ವದ, ಲೋಕೆಟ್ ಚಟರ್ಜಿ, ಸರೋಜ್ ಪಾಂಡೆ, ದೇಬೊಶ್ರೀ ಚೌಧರಿ, ಸೊನಾಲ್ ಮಾನ್ ಸಿಂಗ್ ಅವರಿದ್ದ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. 

ಮೋದಿ ಸರ್ಕಾರವನ್ನು ಗುರಿಯಾಗಿರಿಸಿಕೊಂಡು ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭೇಟಿ ಬಚಾವೋ, ಭೇಟಿ ಪಡಾವೋ ಎಂಬ ಘೋಷ ವಾಕ್ಯ ಪರಿಚಯಿಸಿದೆ. ಆದರೆ ಹೆಣ್ಣುಮಕ್ಕಳನ್ನು ಯಾರಿಂದ ರಕ್ಷಿಸಬೇಕು? ಬಿಜೆಪಿ ಶಾಸಕರಿಂದ ರಕ್ಷಿಸಬೇಕು, ನೀವು ಮೇಕ್ ಇನ್ ಇಂಡಿಯಾ ಬಗ್ಗೆ ಕೇಳಿದ್ದೀರಿ ಆದರೆ ಅದು ರೇಪ್ ಇನ್ ಇಂಡಿಯಾ ಆಗಿದೆ ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಟೀಕಿಸಿದ್ದರು. 

SCROLL FOR NEXT