ಸಂಗ್ರಹ ಚಿತ್ರ 
ದೇಶ

ಎ.ಬಿ ಡಿವಿಲಿಯರ್ಸ್ ನಿವೃತ್ತಿ ವಾಪಾಸು ಪಡೆಯುವಂತೆ ಪ್ರಯತ್ನಿಸುತ್ತೇವೆ: ಮಾರ್ಕ್‌ ಬೌಷರ್‌

ಎ.ಬಿ ಡೆವಿಲಿಯರ್ಸ್ ಸೇರಿದಂತೆ ನಿವೃತ್ತಿ ಪಡೆದಿರುವ ಹಲವು ಆಟಗಾರರು ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಮರಳಿ ತರುವ ಪ್ರಯತ್ನ ನಡೆಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನೂತನ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ ತಿಳಿಸಿದ್ದಾರೆ.

ಜೋಹಾನ್ಸ್‌ಬರ್ಗ್‌: ಎ.ಬಿ ಡೆವಿಲಿಯರ್ಸ್ ಸೇರಿದಂತೆ ನಿವೃತ್ತಿ ಪಡೆದಿರುವ ಹಲವು ಆಟಗಾರರು ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಮರಳಿ ತರುವ ಪ್ರಯತ್ನ ನಡೆಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನೂತನ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ ತಿಳಿಸಿದ್ದಾರೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್‌ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಹಿರಿಯ ಆಟಗಾರ ಎಬಿ ಡಿವಿಲಿಯರ್ಸ್‌ ಅವರನ್ನು ಮತ್ತೇ ರಾಷ್ಟ್ರೀಯ ತಂಡಕ್ಕೆ ಮರಳಿ ಕರೆ ತರಲು ಕ್ರಿಕೆಟ್‌ ದಕ್ಷಿಣ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇತ್ತೀಚಿಗಷ್ಟೆ ಸಿಎಸ್‌ಎಗೆ ನೂತನ ನಿರ್ದೇಶಕರಾಗಿ ಗ್ರೇಮ್‌ ಸ್ಮಿತ್‌ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೆ ಸ್ಮಿತ್‌ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಮುಖ್ಯ ಕೋಚ್‌ ಆಗಿ ಮಾಜಿ ವಿಕೆಟ್‌ ಕೀಪರ್‌ ಹಾಗೂ ಬ್ಯಾಟ್ಸ್‌ಮನ್ ಮಾರ್ಕ್‌ ಬೌಷರ್‌ ಅವರನ್ನು ನೇಮಿಸಿದ್ದಾರೆ.

"ಮುಂದಿನ ವರ್ಷ ನಡೆಯುವ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಗೆ ಬಲಿಷ್ಟ ತಂಡದೊಂದಿಗೆ ತೆರಳಲು ನಾವು ತೀರ್ಮಾನಿಸಿದ್ದೇವೆ. ಎ.ಬಿ ಡಿ ವಿಶ್ವ ಕ್ರಿಕೆಟ್ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಹೀಗಾಗಿ ಒಮ್ಮೆ ಅವರೊಂದಿಗೆ ಮಾತನಾಡಿ ನಿವೃತ್ತಿ ಹಿಂಪಡೆಯುವಂತೆ ಮನವಿ ಮಾಡಬಹುದು. ಅಂತೆಯೇ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನಕ್ಕೆ ಉತ್ತಮ ತಂಡದ ಅವಶ್ಯಕತೆ ಇದ್ದು, ಉತ್ತಮ ತಂಡಕ್ಕಾಗಿ ಕೆಲ ಅಡೆತಡೆಗಳು ಇವೆ. ಅವುಗಳನ್ನು ಪರಿಹರಿಸಿಕೊಳ್ಳಬೇಕು. ಮಾದ್ಯಮ, ತಂಡದ ಸಹ ಆಟಗಾರರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel