ದೇಶ

ಉನ್ನಾವೋ ಅತ್ಯಾಚಾರ: ಸಿಬಿಐ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ!

Nagaraja AB

ನವ ದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಚ್ ಶೀಟ್ ಸಲ್ಲಿಸುವಲ್ಲಿ ವಿಳಂಬ ಮಾಡಿರುವ ತನಿಖಾ ಸಂಸ್ಥೆ  ಸಿಬಿಐಯನ್ನು  ತೀಸ್ ಹಜಾರಿ ನ್ಯಾಯಾಲಯ ತೀವ್ರವಾಗಿ  ತರಾಟೆಗೆ ತೆಗೆದುಕೊಂಡಿದೆ.

 ತನಿಖೆ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳ ಗೈರು ಹಾಜರಿ ಹಾಗೂ ಸಂತ್ರಸ್ತೆಯ ಹೇಳಿಕೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಸೋರಿಕೆ ಮಾಡಿರುವ ಬಗ್ಗೆ  ನ್ಯಾಯಾಲಯ ಸಿಬಿಐ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 

ಇಂತಹ ಸಂದರ್ಭಗಳಲ್ಲಿ ಸಂತ್ರಸ್ತೆಯಿಂದ ಹೇಳಿಕೆ ದಾಖಲು ಮಾಡಿಕೊಳ್ಳುವಾಗ ಕಾನೂನು ಪ್ರಕಾರ ಮಹಿಳಾ ಅಧಿಕಾರಿಗಳು ಇರಬೇಕಾಗುತ್ತದೆ. ಆದರೆ, ಅಶ್ಚರ್ಯವೆಂದರೆ ಸಂತ್ರಸ್ತೆಯ ಮನೆಗೆ ಹೋಗದೆ ಅನೇಕ ಬಾರಿ ಆಕೆಯನ್ನು ಸಿಬಿಐ ಅಧಿಕಾರಿಗಳ ಕಚೇರಿಗೆ ಕರೆಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. 

ಪೊಕ್ಸೊ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಇಂತಹ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಸಂತ್ರಸ್ತೆಯನ್ನು ಸತತವಾಗಿ ಸಿಬಿಐ ಕಚೇರಿಗೆ ಕರೆಸಿಕೊಳ್ಳಲಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

2019 ಜುಲೈ ತಿಂಗಳಲ್ಲೇ ಇಡೀ ವಿಚಾರಣೆ ಮುಗಿದಿದ್ದರೂ ಅಕ್ಟೋಬರ್ 3, 2019ರಂದು ಸಿಬಿಐ ಚಾರ್ಚ್ ಶೀಟ್ ದಾಖಲಿಸಿದೆ. ಪ್ರಕರಣವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಂತ್ರಸ್ತೆಯಿಂದ ಪಡೆದ ಪ್ರಮುಖ ಮಾಹಿತಿಗಳು ಸೋರಿಕೆ ಬಗ್ಗೆಯೂ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT