ಲೆ, ಜನರಲ್ ಮನೋಜ್ ಮುಕುಂದ್ ನಾರವಾನೆ 
ದೇಶ

ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥ ಲೆ. ಜ. ಮನೋಜ್ ಮುಕುಂದ್ ನಾರವಾನೆ

ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆ, ಜನರಲ್ ಮನೋಜ್ ಮುಕುಂದ್ ನಾರವಾನೆ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ:ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆ, ಜನರಲ್ ಮನೋಜ್ ಮುಕುಂದ್ ನಾರವಾನೆ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


ಲೆ.ಜ,ನಾರವಾನೆ ಸದ್ಯ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ತಿಂಗಳ 31ರಂದು ಜನರಲ್ ಬಿಪಿನ್ ರಾವತ್ ಅವರು ಸೇವೆಯಿಂದ ನಿರ್ಗಮಿಸುವುದರಿಂದ ಲೆ.ಜ.ನಾರವಾನೆ ಭಾರತೀಯ ಸೇನೆಯ 28ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಸೇವಾ ಹಿರಿತನದ ಆಧಾರದ ಮೇಲೆ ಲೆ.ಜ.ನಾರವಾನೆ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇವರು ಕಳೆದ ಸೆಪ್ಟೆಂಬರ್ 1ರಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಇದಕ್ಕೂ ಮುನ್ನ ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದರು. 


ರಾಷ್ಟ್ರೀಯ ರಕ್ಷಣಾ ಶೈಕ್ಷಣಿಕ ಸಂಸ್ಥೆ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಲೆ,ನಾರವಾನೆ ವಿದ್ಯಾರ್ಥಿಯಾಗಿದ್ದರು. 1980ರ ಜೂನ್ ನಲ್ಲಿ ಸಿಖ್ ಲೈಟ್ ಇನ್ಫಾಂಟ್ರಿ ರೆಜಿಮೆಂಟ್ 7ನೇ ಬೆಟಾಲಿಯನ್ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ವಿರುದ್ಧ ಪ್ರತಿಭಟನೆಗೆ ಬ್ರೇಕ್: ನವದೆಹಲಿಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿ, ಎಲ್ಲೆಡೆ ಭದ್ರತೆ ಹೆಚ್ಚಳ..!

ಗಾಂಧಿ ಜಯಂತಿ: ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ..!

FlyDubai ವಿಮಾನ ಪತನ ಯತ್ನದ ಹಿಂದೆ ಇರಾನ್ ಕೈವಾಡ..? ತುಂಬಾ ಕಠಿಣ ಹೊಡೆತ ಬೀಳಲಿದೆ; ಟ್ರಂಪ್ ಕಠಿಣ ಎಚ್ಚರಿಕೆ

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!