ದೇಶ

ಜಾಮಿಯಾ ಹಿಂಸಾಚಾರ: 'ನಾವು ಭಯಗೊಂಡಿರಲಿಲ್ಲ- ಸ್ನೇಹಿತನನ್ನು ಪೊಲೀಸರಿಂದ ರಕ್ಷಿಸಿದ ವಿದ್ಯಾರ್ಥಿನಿಯರು! 

Nagaraja AB

ನವದೆಹಲಿ: ಪೊಲೀಸರ ನಡುವಣ ಘರ್ಷಣೆ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರಿಂದ ರಕ್ಷಿಸಿದ ಮೂವರ ವಿದ್ಯಾರ್ಥಿನಿಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅವರ ಧೈರ್ಯಕ್ಕೆ ಕುಟುಂಬ ಹಾಗೂ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. 

ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಶಹೀನ್ ಅಬ್ದುಲ್ಲಾನನ್ನು ರಕ್ಷಿಸಿದ ವಿಡಿಯೋ ನೋಡಿದ ನಂತರವೇ ಆ ಭಯಾನಕ ಘಟನೆ ಮನವರಿಕೆಯಾಗುತ್ತಿದೆ ಎಂದು ಈ ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ 22 ವರ್ಷದ ಲದೀಬಾ ಫರ್ಜಾನಾ ಹೇಳಿದ್ದಾರೆ.

ನಾವು ಭಯಗೊಂಡಿರಲಿಲ್ಲ. ಪೊಲೀಸರಿಂದ ತಮ್ಮ ಸ್ನೇಹಿತನನ್ನು ರಕ್ಷಿಸಲು ಮಾತ್ರ ಗಮನ ಹರಿಸಿದ್ದೇವು. ಆ ಸಂದರ್ಭದಲ್ಲಿ ಏನನ್ನು ಯೋಚಿಸಲಿಲ್ಲ. ನಮ್ಮ ಸಹೋದರನಂತಿದ್ದ ಸ್ನೇಹಿತನನ್ನು ರಕ್ಷಿಸಬೇಕಾಗಿತ್ತು ಎಂದು ಬಿಎ ಅರಾಬಿಕ್ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಫರ್ಜಾನಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಅಶ್ರುವಾಯು ಹೊಗೆಯಿಂದಾಗಿ ಉಸಿರಾಟ ತೊಂದರೆಕ್ಕೊಳಗಾಗಿದ್ದ ಫರ್ಜಾನಾಳನ್ನು ಆಕೆಯ ಸ್ನೇಹಿತರಾದ ಅಯೇಷಾ ರೇನಾ ಹಾಗೂ ತಾಸ್ನೀಮ್  ನಂತರ ಮನೆಗೆ ಕರೆದೊಯ್ದಿದ್ದಾರೆ. ಇವರೆಲ್ಲರೂ ಕೇರಳದವರಾಗಿದ್ದಾರೆ. 

ಮನೆಗೆ ಬಂದ ನಂತರ ತಮ್ಮ ತಂದೆ ಹಾಗೂ ಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆಹಲಿಯನ್ನು ಬಿಡುವುದಿಲ್ಲ ಎಂದು ಫರ್ಜಾನ್ ತಿಳಿಸಿದ್ದಾರೆ.  ಮುಸ್ಲಿಂರನ್ನ ಟಾರ್ಗೆಟ್ ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಅಯೇಷಾ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT