ದೇಶ

ಪೌರತ್ವ ಕಾಯ್ದೆ ಪ್ರತಿಭಟನೆ: ಪ್ರಮುಖ ಟೆಲಿಕಾಂ ಕಂಪನಿಗಳಿಂದ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

Manjula VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳಾದ ಎರ್'ಟೆಲ್, ವೊಡಾಫೋನ್, ಐಡಿಯಾ ಹಾಗೂ ರಿಲಯನ್ಸ್ ಜಿಯೋ ರಾಜಧಾನಿ ದೆಹಲಿಯಲ್ಲಿ ಇಂಟರ್ನೆಟ್, ಸಂದೇಶ ರವಾನೆ ಹಾಗೂ ದೂರವಾಣಿ ಕರೆ ಸೇವೆಗಳನ್ನು ಸ್ಥಗಿತಗೊಳಿಸಿವೆ. 

ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಉತ್ತರ ಹಾಗೂ ಕೇಂದ್ರೀಯ ಜಿಲ್ಲೆಗಳಲ್ಲಿ, ಮಂಡಿ ಹೌಸ್, ಸೀಲಾಂಪುರ, ಜಫ್ಫರ್ಬಾದ್, ಮುಸ್ತಾಫಾಬಾದ್, ಜಮಿಯಾ ನಗರ, ಶಹೀನ್ ಬಾಘ್ ಹಾಗೂ ಬವನಾದಲ್ಲಿ ನೆಟ್ವರ್ಕ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಟೆಲಿಕಾಂ ಕಂಪನಿಗಳು ಮಾಹಿತಿ ನೀಡಿವೆ. 

ಪ್ರತಿಭಟನೆಗೆ ಅನುಮತಿ ನಿರಾಕರಣೆ ನಡುವೆಯೂ ಸಾವಿರಾರೂ ಮಂದಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

SCROLL FOR NEXT