ದೇಶ

ಭಾರತದಲ್ಲಿ ಜನಿಸಿದರೂ ಎಂಬ ಕಾರಣಕ್ಕೆ ಫರ್ವೇಜ್ ಮುಷರಫ್ ಅವರಿಗೆ ಪೌರತ್ವ ಕೊಡೋಣವೇ?

Shilpa D

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಜನಿಸಿದರೂ ಎಂಬ ಕಾರಣಕ್ಕಾಗಿ ದೇಶದ್ರೋಹ ಪ್ರಕರಣದಡಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಫರ್ವೇಜ್ ಮುಷರಫ್ ಅವರಿಗೆ ಭಾರತೀಯ ಪೌರತ್ವ ಕೊಡೋಣವೇ ಎಂದು ಪ್ರಶ್ನಿಸಿದ್ದಾರೆ.

ದೆಹಲಿಯ ದರಿಯಾಗಂಜ್ ಮೂಲದವರಾದ ಮುಷರಫ್ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಅವರಿಗೆ ತ್ವರಿತಗತಿಯ ಭಾರತೀಯ ಪೌರತ್ವ  ನೀಡೋಣವೇ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದೂಗಳ ವಂಶಸ್ಥರೆಲ್ಲರೂ ಪ್ರಸಕ್ತ ಸಿಎಎ ಕಾಯಿದೆ ಅಡಿ ಬರಲು ಅರ್ಹರಾಗಿದ್ದಾರೆ ಎಂದು ಸ್ವಾಮಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ದೇಶದ್ರೋಹ ಪ್ರಕರಣದ ಸಂಬಂಧ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರಿಗೆ ಇಸ್ಲಾಮಾಬಾದ್ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

SCROLL FOR NEXT