ದೇಶ

ಭಾರತೀಯ ನಾಗರಿಕರು ಬ್ಯಾಂಕ್ ಖಾತೆ ತೆರೆಯಲು ಧರ್ಮ ಘೋಷಿಸುವ ಅಗತ್ಯವಿಲ್ಲ- ಹಣಕಾಸು ಸಚಿವಾಲಯ

Nagaraja AB

ನವದೆಹಲಿ: ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ  (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಕೆವೈಸಿ ಅಥವಾ ಬ್ಯಾಂಕ್ ಖಾತೆ ತೆರೆಯಲು, ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಗೆ ಭಾರತೀಯ ನಾಗರಿಕರು ಧರ್ಮ ಘೋಷಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯದ  ಹಣಕಾಸು ಸೇವೆ ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

"ಬ್ಯಾಂಕುಗಳ  ಬಗ್ಗೆಗಿನ ಅಂತಹ ಆಧಾರರಹಿತ ವದಂತಿಗಳಿಗೆ ಒಳಗಾಗಬೇಡಿ ಎಂದು ಅವರು ಹೇಳಿದ್ದಾರೆ. 

ಅನಿವಾಸಿ ಭಾರತೀಯ ಸಾಮಾನ್ಯ ರೂಪಾಯಿ ಖಾತೆಗಳು ( ಎನ್. ಆರ್. ಓ) ಖಾತೆ ತೆರೆಯುವಾಗ  ಫೆಮಾ ಕಾಯ್ದೆಯ ನಿಯಮಗಳಲ್ಲಿನ ಬದಲಾವಣೆಗನುಗುಣವಾಗಿ  ಗ್ರಾಹಕರು ಮತ್ತು ಠೇವಣಿದಾರರು ಕೆವೈಸಿ ಫಾರಂನಲ್ಲಿ ಧರ್ಮದ ವಿವರಗಳನ್ನು ಬ್ಯಾಂಕ್ ಗಳ ಶೀಘ್ರದಲ್ಲಿಯೇ ಪಡೆಯಬಹುದು ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಈ ಸ್ಪಷ್ಟೀಕರಣ ನೀಡಲಾಗಿದೆ. 

SCROLL FOR NEXT