ದೇಶ

ಕೇರಳ: ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ, ಎಡಪಕ್ಷಗಳ ಯುವ ಒಕ್ಕೂಟದಿಂದ ಪಂಜಿನ ಮೆರವಣಿಗೆ

Nagaraja AB

ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ ಮುಂದುವರೆದಿರುವಂತೆ ಕೇರಳದಲ್ಲಿ   ರಾತ್ರಿ ಕೂಡಾ ಪ್ರತಿಭಟನೆ ನಡೆಸಲಾಗಿದೆ.

ತಿರುವನಂತಪುರಂನಲ್ಲಿ ಎಡಪಕ್ಷಗಳ ಯುವ  ಒಕ್ಕೂಟದಿಂದ ಪಂಜಿನ ಮೆರವಣಿಗೆ ನಡೆಸಲಾಗಿದೆ.  ಮಹಿಳೆಯರು ಮಕ್ಕಳು ಕೂಡಾ ಪಂಜನು ಹಿಡಿದು ಮೆರವಣಿಗೆಯಲ್ಲಿ ಸಾಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ರಾಜಸ್ತಾನದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುರಕ್ಷತೆ ಹಾಗೂ ಭದ್ರತೆ ಕಾರಣದಿಂದ ನಾಳೆ  ಬೆಳಗ್ಗೆ 8 ಗಂಟೆಯಿಂದ 2 ಗಂಟೆಯವರೆಗೂ ಜೈಪುರ ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಜೈಪುರ ಮೆಟ್ರೋ ರೈಲು ಕಾರ್ಪೋರೇಷನ್ ತಿಳಿಸಿದೆ. 

ಆರ್ ಜೆಡಿ ನೇತೃತ್ವದಲ್ಲಿ ನಡೆದ ಬಿಹಾರ ಬಂದ್  ಹಿನ್ನೆಲೆಯಲ್ಲಿ  14 ಪ್ರಕರಣಗಳಲ್ಲಿ 13  ಮಂದಿಯನ್ನು ಬಂಧಿಸಲಾಗಿದೆ ಎಂದು ಪಾಟ್ನಾ ಎಡಿಜಿ ಜೀತೇಂದ್ರ ಕುಮಾರ್ ತಿಳಿಸಿದ್ದಾರೆ. 

SCROLL FOR NEXT