ಹರ್ದೀಪ್ ಪುರಿ 
ದೇಶ

ಮೋದಿ ಸರ್ಕಾರ ಸುಮಾರು 600 ಮುಸ್ಲಿಮರಿಗೆ ಪೌರತ್ವ ನೀಡಿದೆ: ಕೇಂದ್ರ ಸಚಿವ

ಹೊಸ ಪೌರತ್ವ ಕಾಯ್ದೆಯ ಬಗ್ಗೆ ತೀವ್ರ ಚರ್ಚೆಯ ನಡುವೆ, ಹೊಸದಾಗಿ ಜಾರಿಗೆ ಬಂದ ಕಾನೂನು ಮಾನವೀಯ ಮೌಲ್ಯಗಳನ್ನು ದೃಢಪಡಿಸುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದ್ದಾರೆ.

ನವದೆಹಲಿ: ಹೊಸ ಪೌರತ್ವ ಕಾಯ್ದೆಯ ಬಗ್ಗೆ ತೀವ್ರ ಚರ್ಚೆಯ ನಡುವೆ, ಹೊಸದಾಗಿ ಜಾರಿಗೆ ಬಂದ ಕಾನೂನು ಮಾನವೀಯ ಮೌಲ್ಯಗಳನ್ನು ದೃಢಪಡಿಸುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದ್ದಾರೆ. ಅಲ್ಲದೆ ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸುಮಾರು 600 ಮುಸ್ಲಿಮರಿಗೆ ಪೌರತ್ವ ನೀಡಿದೆ ಎಂದು ಅವರು ತಿಳಿಸಿದ್ದಾರೆ.

"ಆಧುನಿಕ ಭಾರತದಲ್ಲಿ, ಟಿಬೆಟ್, ಶ್ರೀಲಂಕಾ, ಉಗಾಂಡಾ ಅಥವಾ ಬಾಂಗ್ಲಾದೇಶದ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಸಿಎಎ ಮಾನವ ಹಕ್ಕುಗಳ ಬಗೆಗಿನ ಈ ಬದ್ಧತೆಯನ್ನು ಬದಲಿಸುವುದಿಲ್ಲ, ಬದಲಾಗಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವವರಾಗಿ ಭಾರತದ ಸ್ಥಾನವನ್ನು ಇದು ಪುನರುಚ್ಚರಿಸುತ್ತದೆ" ಎಂದು ಸರಣಿ ಟ್ವೀಟ್‍ನಲ್ಲಿ ಹರ್ದೀಪ್‍ ಸಿಂಗ್ ಪುರಿ ಹೇಳಿದ್ದಾರೆ.

"ಈ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬುದು ಸಿಎಎ ಅರ್ಥವಲ್ಲ - ವಾಸ್ತವವಾಗಿ, ಕಳೆದ ಐದು ವರ್ಷಗಳಲ್ಲಿ, ಪಿಎಂ ಮೋದಿಯವರ ಸರ್ಕಾರವು ಈ ದೇಶಗಳ ಸುಮಾರು 600 ಮುಸ್ಲಿಮರಿಗೆ ಪೌರತ್ವವನ್ನು ನೀಡಿದೆ. ಸಿಎಎ ಭಾರತದ ಜಾತ್ಯತೀತ ರುಜುವಾತುಗಳನ್ನು ಬದಲಾಯಿಸುವುದಿಲ್ಲ ಎಂದು ವಿವರಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮ, ಜಾತಿ, ಮತ, ಪಂಥ, ಜನಾಂಗೀಯತೆ ಅಥವಾ ಜನಾಂಗವನ್ನು ಲೆಕ್ಕಿಸದೆ ಯಾವುದೇ ಭಾರತೀಯ ನಾಗರಿಕರ "ಹಕ್ಕುಗಳನ್ನು ಬದಲಾಯಿಸುವುದಿಲ್ಲ. ವಿರೋಧ ಪಕ್ಷಗಳು ಕಾಯ್ದೆ ಕುರಿತು ತಪ್ಪು ಸಂದೇಶ ರವಾನಿಸುತ್ತಿದ್ದು, ಸಾರ್ವಜನಿಕರ ಭಾವನೆಗಳನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಮಾಜಿ ರಾಜತಾಂತ್ರಿಕರೂ ಆಗಿರುವ ಹರ್ದೀಪ್‍ ಸಿಂಗ್ ಪುರಿ, ಮಮತಾ ಬ್ಯಾನರ್ಜಿ ಹಾಗೂ ಇನ್ನಿತರ ರಾಜಕೀಯ ಮುಖಂಡರನ್ನು ಟೀಕಿಸುತ್ತಾ, ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಸುಳ್ಳು ನಿರೂಪಣೆ ಮಾಡುತ್ತಾ, ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಯ ನಾಶದಂತಹ ಹಿಂಸಾತ್ಮಕ ಪ್ರತಿಭಟನೆಗಳನ್ನು ಪ್ರಚೋದಿಸಿದ್ದಾರೆ. ಪೊಲೀಸರ ಮೇಲೂ ದಾಳಿ ಮಾಡಲಾಗಿದೆ, ಇನ್ನೂ ಕೆಲವರು ವಿದೇಶಿ ಹಸ್ತಕ್ಷೇಪವನ್ನು ಆಹ್ವಾನಿಸುವ ಮಟ್ಟಕ್ಕೆ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT