ದೇಶ

ಹಿಂಸಾಚಾರ ಸೃಷ್ಟಿಸುವರಿಗೆ ಎಲೆಕ್ಟ್ರಿಕ್ ಶಾಕ್: ಗಲಭೆಕೋರರ ಹಿಮ್ಮೆಟ್ಟಿಸಲು ಭದ್ರತಾ ಪಡೆಗಳಿಂದ ಹೊಸತಂತ್ರ ಪ್ರಯೋಗ

Manjula VN

ನವದೆಹಲಿ: ಪೌರತ್ವ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆಯುತ್ತಿರುವ ನಡುವಲ್ಲೇ ಇಂತಹ ಪ್ರತಿಭಟನೆಗಳನ್ನು ತಡೆಯುವ ಸಲುವಾಗಿ ಅರೆಸೇನಾ ಪಡೆಗಳು ಇದೀಗ ಗಲಭೆ ನಿಗ್ರಹ ಶೀಲ್ಡ್ ಗಳ ಬಳಕೆಗೆ ಮುಂದಾಗಿವೆ ಎಂದು ವರದಿಗಳು ತಿಳಿಸಿವೆ. 

ಶುಕ್ರವಾರ ರಾಜಧಾನಿ ದೆಹಲಿಯಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆ ವೇಳೆ, ಭದ್ರತಾಗೆ ನಿಯೋಜನೆಗೊಂಡಿದ್ದ ಕ್ಷಿಪ್ರ ಕಾರ್ಯಪಡೆ (ಆರ್'ಪಿಎಫ್) ಸಿಬ್ಬಂದಿ ಅತ್ಯಾಧುನಿಕ ಎಲೆಕ್ಟ್ರಿಕ್ ಶಾಕ್ ನೀಡಬಲ್ಲ ಶೀಲ್ಡ್ ಗಳನ್ನು ಬಳಸಿದ್ದು ಕಂಡು ಬಂದಿದೆ. 

ಇದೂವರೆಗೆ ಆರ್'ಪಿಎಫ್ ಸಿಬ್ಬಂದಿ ಅಥವಾ ಪೊಲೀಸರು, ಪ್ರತಿಭಟನೆ ತೆಯಲು ಪಾಲಿಕಾರ್ಬೋನೆಟ್ ಶೀಲ್ಡ್ ಗಳನ್ನು ಬಳಕೆ ಮಾಡುತ್ತಿತ್ತು. ಇದರಿಂದ ತಮ್ಮ ಮೇಲೆ ಎರಗಿ ಬರುವ ಕಲ್ಲುಗಳನ್ನು ಅವರು ತಡೆಯಬಹುದಿತ್ತು ಅಥವಾ ಇಂತಹ ಶೀಲ್ಡ್ ಗಳನ್ನು ಅಡ್ಡ ಹಿಡಿದು, ಪ್ರತಿಭಟನಾಕಾರರು ಮುಂದೆ ಸಾಗದಂತೆ ಅಡ್ಡಗಟ್ಟಬಹುದಿತ್ತು. ಆದರೆ, ಇವು ಅತ್ಯಂತ ಪರಿಣಾಮಕಾರಿಯಾಗೇನೂ ಇರಲಿಲ್ಲ. 

ಈ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಿಕ್ ಶಾಕ್ ನೀಡಬಲ್ಲ ಶೀಲ್ಡ್ ಗಳನ್ನು ಆರ್'ಪಿಎಫ್ ಸಿಬ್ಬಂದಿಗೆ ನೀಡಲಾಗಿದೆ. ಈ ಶೀಲ್ಡ್ ಗಳಲ್ಲಿ ಸ್ವಿಚ್ ಗಳನ್ನು ನೀಡಲಾಗಿದ್ದು, ಆದನ್ನು ಒತ್ತಿದರೆ ವಿದ್ಯುತ್ ಪ್ರವಹಿಸಲು ಆರಂಭವಾಗುತ್ತದೆ. ಇಂತಹ ಶೀಲ್ಡ್ ಗಳನ್ನು ಪ್ರತಿಭಟನಾಕಾರ ಮುಟ್ಟಿದರೆ ಅವರಿಗೆ ವಿದ್ಯುತ್ ಶಾಕ್ ಹೊಡೆಯುತ್ತದೆ. 

ಎಲೆಕ್ಟ್ರಿಕ್ ಶಾಲ್ ಶೀಲ್ಡ್ ಎಂಬುದು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಬಳಿಸುವ ಒಂದು ಉಪಕರಣವಾಗಿದೆ. ಈ ಉಪಕರಣದ ಒಂದು ಬಂದಿಯಲ್ಲಿ ಸ್ವಿಚ್ ಇದ್ದರೆ ಮತ್ತೊಂದು ಬದಿಯಲ್ಲಿ ಎಲೆಕ್ಟ್ರಿಕ್ ಸರ್ಕಿಟ್ ಇರುತ್ತದೆ. ಭದ್ರತಾ ಪಡೆಗಳು ಅಗತ್ಯ ಸಂದರ್ಭದಲ್ಲಿ ಸ್ವಿಚ್ ಒತ್ತಿದಾಕ್ಷಣ. ಎಲೆಕ್ಟ್ರಿಕ್ ಸರ್ಕಿಟ್ ನಲ್ಲಿ ವಿದ್ಯುತ್ ಪ್ರವಹಿಸುತ್ತದೆ. 

ಯಾವುದೇ ಪ್ರತಿಭಟನಾಕಾರ ಈ ಉಪಕರಣವನ್ನು ಮುಟ್ಟಿದರೆ ಶಾಕ್ ಹೊಡೆಯುತ್ತದೆ. 5 ಸೆಕೆಂಡ್ ಗಿಂತ ಹೆಚ್ಚಿನ ಕಾಲ ಇದನ್ನು ಮುಟ್ಟಿ ಇಟ್ಟುಕೊಂಡರೆ, ವಿದ್ಯುದಾಘಾತಕ್ಕೆ ಒಳಗಾಗಿ ಅವರು ಕೆಳಗೆ ಬೀಳುವ ಸಾಧ್ಯತೆ ಇರುತ್ತದೆ. ಆದರೆ, ಈ ಉಪಕರಣದಲ್ಲಿ ಕೇವಲ 12 ವ್ಯಾಟ್ ವಿದ್ಯುತ್ ಪ್ರವಹಿಸುವ ಕಾರಣ, ಇದು ಮಾರಣಾಂತಿಕವಾಗಿರುವುದಿಲ್ಲ. ಇಂತಹ ಶೀಲ್ಡ್ ಗಳ ಬೆಲೆ ಸುಮಾರು ರೂ.20,000 ಇದೆ. 

SCROLL FOR NEXT